
ಶಹಾಪುರ: ತಾಲ್ಲೂಕಿನಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಮೂವರು ವ್ಯಕ್ತಿಗಳ ಅನುಮಾನಸ್ಪದವಾಗಿ ನಡೆದಿರುವು ಸಾವಿನ ಪ್ರಕರಣಗಳನ್ನು ಸಿಐಡಿಗೆ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಮಾದಿಗ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮಾದಿಗ ಸಮುದಾಯಕ್ಕೆ ಸೇರಿದ ಶಿವರಾಜ ಶರಣಪ್ಪ, ಮರೆಮ್ಮ ವಿಜಯಕುಮಾರ ದೇವಿನಗರ ಹಾಗೂ ಜಯಮ್ಮ ಪರಶುರಾಮ ಈ ಮೂವರ ಸಾವು ಅನುಮಾನಸ್ಪವಾಗಿವೆ. ಆಯಾ ಪೊಲೀಸ್ ಠಾಣೆ ಮಟ್ಟದ ತನಿಖಾಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ವಿಚಾರಣೆ ಹಾಗೂ ತನಿಖೆ ನಡೆಸುತ್ತಿಲ್ಲ. ಆದ್ದರಿಂದ ಮಾದಿಗ ಜನಾಂಗದಲ್ಲಿ ಆತಂಕ ಹಾಗೂ ಅಶಾಂತಿಯನ್ನು ಉಂಟು ಮಾಡಿದೆ ಎಂದು ಮುಖಂಡರು ಹೇಳಿದರು.
ಮಾದಿಗ ಸಮುದಾಯದ ಮುಖಂಡರಾದ ರುದ್ರಪ್ಪ ಹುಲಿಮನಿ, ವಾಸುದೇವ ಕಟ್ಟಿಮನಿ, ಮಲ್ಲಪ್ಪ ಉಳ್ಳಂಡಗೇರಿ, ವೆಂಕಟೇಶ ಆಲೂರ, ಶಾಂತಪ್ಪ ಕಟ್ಟಿಮನಿ, ಬಸವರಾಜ ಪೂಜಾರಿ, ವಿಜಯಕುಮಾರ ಎದುರುಮನಿ, ಹುಲಗಪ್ಪ ದೊಡ್ಮನಿ, ಮಾನಪ್ಪ ವಠಾರ್, ಚಂದಪ್ಪ ಹಲಿಗಿ, ಭೀಮರಾಯ ಕರ್ಕಳ್ಳಿ, ಸಿದ್ದಪ್ಪ ಗೋನಾಲ, ಭೀಮರಾಯ ಪೂಜಾರಿ, ಭೀಮರಾಯ ಕಾಂಗ್ರೆಸ್, ಭೀಮಾಶಂಕರ ಕಟ್ಟಿಮನಿ, ಶಿವುಕುಮಾರ ದೊಡ್ಮನಿ, ಹುಸೆನಪ್ಪ ಕಟ್ಟಿಮನಿ, ಪರಶುರಾಮ ಮಹಲರೋಜ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.