ADVERTISEMENT

ಶಹಾಪುರ, ವಡಗೇರಾ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ನಿಗದಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 2:19 IST
Last Updated 23 ಜನವರಿ 2021, 2:19 IST
ಡಾ. ರಾಗಪ್ರಿಯಾ ಆರ್.,
ಡಾ. ರಾಗಪ್ರಿಯಾ ಆರ್.,   

ಯಾದಗಿರಿ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಶಹಾಪುರ, ವಡಗೇರಾ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಪಡಿಸಲಾಯಿತು.

ಗ್ರಾಮ ಪಂಚಾಯಿತಿಯ ಮೊದಲ 30 ತಿಂಗಳವಧಿಗೆ ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಶಹಾಪುರ ತಾಲ್ಲೂಕಿನ 24 ಹಾಗೂ ವಡಗೇರಾ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ನೂತನ ಸದಸ್ಯರ ಸಭೆ ಜರುಗಿಸಿ, ಅವರ ಸಮ್ಮುಖದಲ್ಲಿಯೇ ಮೀಸಲಾತಿ ನಿಗದಿಪಡಿಸಿದರು.

ಇದಕ್ಕೂಮುನ್ನ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಕನಸಾದ ಗ್ರಾಮ ಸ್ವರಾಜ್‌ವನ್ನು ನನಸುಗೊಳಿಸುವುದು ಗ್ರಾಮ ಪಂಚಾಯಿತಿ ಸದಸ್ಯರ ಕರ್ತವ್ಯವಾಗಿದೆ. ಗ್ರಾಮದ ಮೂಲಭೂತ ಸೌಲಭ್ಯಗಳಾದ ನೀರು, ರಸ್ತೆ, ಒಳ ಚರಂಡಿ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮಗಳನ್ನು ಅಭಿವೃದ್ಧಿ ಕಡೆ ಸಾಗುವಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಮುದಾಗಿ ಎಂದುಸಲಹೆ ನೀಡಿದರು.

ADVERTISEMENT

ಈ ವೇಳೆ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಶಹಾಪುರ ತಹಶೀಲ್ದಾರ್ ಮಹಿಬೂಬಿ, ವಡಗೇರಾ ತಹಶೀಲ್ದಾರ್‌ ಸುರೇಶ ಅಂಕಲಗಿ ಸೇರಿದಂತೆ ಅಧಿಕಾರಿಗಳು ಇದ್ದರು.

***

ಶಹಾಪುರ ತಾಲ್ಲೂಕಿನ 24 ಗ್ರಾ.ಪಂಗಳ ಮೀಸಲಾತಿ
ಗ್ರಾಮ ಪಂಚಾಯಿತಿ; ಅಧ್ಯಕ್ಷ; ಉಪಾಧ್ಯಕ್ಷ

ಗೋಗಿ ಕೆ; ಸಾಮಾನ್ಯ; ಪರಿಶಿಷ್ಟ ಜಾತಿ (ಮಹಿಳೆ)

ಕನ್ಯಾಕೊಳ್ಳೂರು; ಸಾಮಾನ್ಯ; ಪರಿಶಿಷ್ಟ ಪಂಗಡ (ಮಹಿಳೆ)

ರಸ್ತಾಪುರ; ಸಾಮಾನ್ಯ; ಪರಿಶಿಷ್ಟ ಜಾತಿ( ಮಹಿಳೆ)

ಅಣಬಿ; ಸಾಮಾನ್ಯ; ಪರಿಶಿಷ್ಟ ಪಂಗಡ (ಮಹಿಳೆ)

ಕೊಳ್ಳೂರು; ಸಾಮಾನ್ಯ; ಪರಿಶಿಷ್ಟ ಜಾತಿ (ಮಹಿಳೆ)

ಇಬ್ರಾಹಿಂಪುರ; ಸಾಮಾನ್ಯ; ಪರಿಶಿಷ್ಟ ಜಾತಿ (ಮಹಿಳೆ)

ಚಟ್ನಳ್ಳಿ; ಸಾಮಾನ್ಯ; ಪರಿಶಿಷ್ಟ ಜಾತಿ (ಮಹಿಳೆ)

ಹೊಸಕೇರಾ; ಸಾಮಾನ್ಯ (ಮಹಿಳೆ); ಪರಿಶಿಷ್ಟ ಪಂಗಡ

ಕಕ್ಕಸಗೇರಾ; ಸಾಮಾನ್ಯ (ಮಹಿಳೆ); ಪರಿಶಿಷ್ಟ ಜಾತಿ

ಮದ್ರಕಿ; ಸಾಮಾನ್ಯ (ಮಹಿಳೆ); ಪರಿಶಿಷ್ಟ ಜಾತಿ

ಸಗರ; ಸಾಮಾನ್ಯ (ಮಹಿಳೆ); ಪರಿಶಿಷ್ಟ ಜಾತಿ

ಶಿರವಾಳ; ಸಾಮಾನ್ಯ (ಮಹಿಳೆ); ಪರಿಶಿಷ್ಟ ಜಾತಿ

ಚಾಮನಾಳ; ಪರಿಶಿಷ್ಟ ಜಾತಿ; ಸಾಮಾನ್ಯ (ಮಹಿಳೆ)

ವನದುರ್ಗಾ; ಪರಿಶಿಷ್ಟ ಜಾತಿ; ಸಾಮಾನ್ಯ (ಮಹಿಳೆ)

ಗೋಗಿ ಪಿ; ಪರಿಶಿಷ್ಟ ಜಾತಿ; ಸಾಮಾನ್ಯ (ಮಹಿಳೆ)

ಖಾನಾಪುರ; ಪರಿಶಿಷ್ಟ ಜಾತಿ; ಸಾಮಾನ್ಯ (ಮಹಿಳೆ)

ಮುಡಬೂಳ; ಪರಿಶಿಷ್ಟ ಜಾತಿ(ಮಹಿಳೆ); ಸಾಮಾನ್ಯ

ಹೊತಪೇಟ; ಪರಿಶಿಷ್ಟ ಜಾತಿ(ಮಹಿಳೆ); ಸಾಮಾನ್ಯ

ಹತ್ತಿಗುಡೂರು; ಪರಿಶಿಷ್ಟ ಜಾತಿ(ಮಹಿಳೆ); ಸಾಮಾನ್ಯ

ನಾಗನಟಗಿ; ಪರಿಶಿಷ್ಟ ಜಾತಿ( ಮಹಿಳೆ); ಸಾಮಾನ್ಯ

ದೋರನಹಳ್ಳಿ; ಪರಿಶಿಷ್ಟ ಜಾತಿ( ಮಹಿಳೆ); ಸಾಮಾನ್ಯ

ಹುರಸುಗುಂಡಗಿ; ಪರಿಶಿಷ್ಟ ಪಂಗಡ; ಸಾಮಾನ್ಯ (ಮಹಿಳೆ)

ಉಕ್ಕಿನಾಳ; ಪರಿಶಿಷ್ಟ ಪಂಗಡ (ಮಹಿಳೆ); ಸಾಮಾನ್ಯ

ಬಿರನೂರ; ಪರಿಶಿಷ್ಟ ಪಂಗಡ (ಮಹಿಳೆ); ಸಾಮಾನ್ಯ

ವಡಗೇರಾ ತಾಲ್ಲೂಕಿನ 17 ಗ್ರಾ.ಪಂಗಳ ಮೀಸಲಾತಿ
ಗ್ರಾಮ ಪಂಚಾಯಿತಿ; ಅಧ್ಯಕ್ಷ; ಉಪಾಧ್ಯಕ್ಷ

ಐಕೂರು; ಪ್ರವರ್ಗ-ಅ(ಮಹಿಳೆ); ಪರಿಶಿಷ್ಟ ಜಾತಿ

ತುಮಕೂರ; ಪ್ರವರ್ಗ-ಅ(ಮಹಿಳೆ); ಪರಿಶಿಷ್ಟ ಜಾತಿ

ಟಿ.ವಡಗೇರಾ; ಪ್ರವರ್ಗ-ಬ; ಸಾಮಾನ್ಯ(ಮಹಿಳೆ)

ಹಯ್ಯಾಳ.ಬಿ; ಸಾಮಾನ್ಯ; ಸಾಮಾನ್ಯ (ಮಹಿಳೆ)

ಕೊಂಕಲ್; ಸಾಮಾನ್ಯ; ಸಾಮಾನ್ಯ (ಮಹಿಳೆ)

ಗುಲಸರಂ; ಸಾಮಾನ್ಯ; ಪರಿಶಿಷ್ಟ ಜಾತಿ( ಮಹಿಳೆ)

ಗೋನಾಳ; ಸಾಮಾನ್ಯ; ಪರಿಶಿಷ್ಟ ಪಂಗಡ( ಮಹಿಳೆ)

ಬಿಲ್ಹಾರ; ಸಾಮಾನ್ಯ; ಸಾಮಾನ್ಯ (ಮಹಿಳೆ)

ಕಾಡಂಗೇರಾ ಬಿ; ಸಾಮಾನ್ಯ (ಮಹಿಳೆ); ಪರಿಶಿಷ್ಟ ಜಾತಿ( ಮಹಿಳೆ)

ವಡಗೇರಾ; ಸಾಮಾನ್ಯ (ಮಹಿಳೆ); ಸಾಮಾನ್ಯ

ಹಾಲಗೇರಾ; ಸಾಮಾನ್ಯ (ಮಹಿಳೆ); ಸಾಮಾನ್ಯ

ಉಳ್ಳೆಸುಗೂರ; ಸಾಮಾನ್ಯ(ಮಹಿಳೆ); ಪ್ರವರ್ಗ-ಅ (ಮಹಿಳೆ)

ತಡಬಿಡಿ; ಪರಿಶಿಷ್ಟ ಜಾತಿ; ಪ್ರವರ್ಗ-ಬ

ಕುರಕುಂದಾ; ಪರಿಶಿಷ್ಟ ಜಾತಿ; ಸಾಮಾನ್ಯ

ನಾಯ್ಕಲ್; ಪರಿಶಿಷ್ಟ ಜಾತಿ( ಮಹಿಳೆ); ಸಾಮಾನ್ಯ

ಬೆಡೆಬೆಂಬಳ್ಳಿ; ಪರಿಶಿಷ್ಟ ಜಾತಿ( ಮಹಿಳೆ); ಸಾಮಾನ್ಯ

ಗುಂಡಗುರ್ತಿ; ಪರಿಶಿಷ್ಟ ಪಂಗಡ (ಮಹಿಳೆ); ಪ್ರವರ್ಗ-ಅ (ಮಹಿಳೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.