ADVERTISEMENT

ಕೃಷಿ ಉತ್ಪನ್ನಗಳ ಸಾಗಣೆ; ಪರಿಶೀಲನೆ

ಜಂಟಿ ಕೃಷಿ ನಿರ್ದೇಶಕರಿಂದ ಚೆಕ್‌ಪೋಸ್ಟ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 16:21 IST
Last Updated 3 ಏಪ್ರಿಲ್ 2020, 16:21 IST
ತೆಲಂಗಾಣ ಚೆಕ್ ಪೋಸ್ಟ್ ಹಾಗೂ ನೆರೆ ಜಿಲ್ಲೆ ರಾಯಚೂರು ಹತ್ತಿರದ ಚೆಕ್ ಪೋಸ್ಟ್‌ಗಳಿಗೆ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಇತ್ತೀಚೆಗೆ ಭೇಟಿ ನೀಡಿದರು
ತೆಲಂಗಾಣ ಚೆಕ್ ಪೋಸ್ಟ್ ಹಾಗೂ ನೆರೆ ಜಿಲ್ಲೆ ರಾಯಚೂರು ಹತ್ತಿರದ ಚೆಕ್ ಪೋಸ್ಟ್‌ಗಳಿಗೆ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಇತ್ತೀಚೆಗೆ ಭೇಟಿ ನೀಡಿದರು   

ಯಾದಗಿರಿ: ಜಿಲ್ಲೆಯ ನೆರೆ ರಾಜ್ಯವಾದ ತೆಲಂಗಾಣ ಚೆಕ್ ಪೋಸ್ಟ್ ಹಾಗೂ ನೆರೆ ಜಿಲ್ಲೆ ರಾಯಚೂರು ಹತ್ತಿರದ ಚೆಕ್ ಪೋಸ್ಟ್‌ಗಳಿಗೆ ಜಂಟಿ ಕೃಷಿ ನಿರ್ದೇಶಕಿದೇವಿಕಾ ಆರ್. ಇತ್ತೀಚೆಗೆ ಭೇಟಿ ನೀಡಿ ಕೃಷಿ ಪರಿಕರ ಮತ್ತು ಕೃಷಿ ಉತ್ಪನ್ನಗಳ ಸಾಗಾಣಿಕೆ ಬಗ್ಗೆ ಪರಿಶೀಲಿಸಿದರು.

ದೇಶದಾದ್ಯಂತ ಕೋವಿಡ್-19 ಹರಡುತ್ತಿರುವ ಪ್ರಯುಕ್ತ ರಾಜ್ಯದಲ್ಲಿ ಲಾಕ್‍ಡೌನ್ ಘೋಷಣೆಯಾಗಿರುವುದರಿಂದ ರೈತರಿಗೆ ಕೃಷಿ ಪರಿಕರಗಳಾದ ಬೀಜ, ಪೀಡೆನಾಶಕ, ರಸಗೊಬ್ಬರ ಲಭ್ಯತೆಯಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಅಗತ್ಯ ವಸ್ತುಗಳ ಪೂರೈಕೆ ಕಾಯ್ದೆಯಡಿ ಸರ್ಕಾರದ ಆದೇಶದನ್ವಯ ಕೃಷಿ ಪರಿಕರ ಮತ್ತು ಕೃಷಿ ಉತ್ಪನ್ನಗಳ ಸಾಗಾಣಿಕೆ ಮಾಡುವಾಗ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಪೊಲೀಸರು ಸಹಕರಿಸಬೇಕು ಎಂದು ಚೆಕ್‍ಪೋಸ್ಟ್‌ಗಳಲ್ಲಿನ ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು.

ರೈತರು ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ಹರಡದಂತೆ ಮುನ್ನೆಚ್ಚರಿಕೆ ಹಾಗೂ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು. ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಸಂಬಂಧಿಸಿದಂತೆ ತೊಂದರೆಗಳಿದ್ದಲ್ಲಿ ಜಂಟಿ ಕೃಷಿ ನಿರ್ದೇಶಕರ ಮೊಬೈಲ್ ಸಂಖ್ಯೆ 82779 33400 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.