ADVERTISEMENT

ವಿದ್ಯುತ್ ಅವಘಡ: ₹3 ಲಕ್ಷ ಮೌಲ್ಯದ ವಸ್ತು ಹಾನಿ

​ಪ್ರಜಾವಾಣಿ ವಾರ್ತೆ
Published 6 ಮೇ 2022, 4:07 IST
Last Updated 6 ಮೇ 2022, 4:07 IST
5ಎಸ್ಎಚ್ಪಿ 2; ಶಹಾಪುರ ತಾಲ್ಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಬುಧವಾರ ವಿದ್ಯುತ್ ಆಕಸ್ಮಿಕ ಘಟನೆಯಿಂದ ಕಿರಾಣಿ ಅಂಗಡಿಗೆ ಬೆಂಕಿ ತಗುಲಿದೆ
5ಎಸ್ಎಚ್ಪಿ 2; ಶಹಾಪುರ ತಾಲ್ಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಬುಧವಾರ ವಿದ್ಯುತ್ ಆಕಸ್ಮಿಕ ಘಟನೆಯಿಂದ ಕಿರಾಣಿ ಅಂಗಡಿಗೆ ಬೆಂಕಿ ತಗುಲಿದೆ   

ಶಹಾಪುರ: ತಾಲ್ಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಬುಧವಾರ ದೇವಿಂದ್ರಪ್ಪ ಗುಡಿಮನಿ ಎನ್ನುವರ ಕಿರಾಣಿ ಅಂಗಡಿಯಲ್ಲಿ ಆಕಸ್ಮಿಕ ವಿದ್ಯುತ್ ದುರ್ಘಟನೆಯಿಂದ ಸುಮಾರು ₹3 ಲಕ್ಷ ಮೌಲ್ಯದ ವಸ್ತುಗಳು ಸುಟ್ಟಿವೆ.

ಅಂಗಡಿಯಲ್ಲಿದ್ದ ಫ್ಯಾನ್, ರೆಫ್ರಿಜೆರೇಟರ್, ದಿನಬಳಕೆಯ ವಸ್ತುಗಳು ಸುಟ್ಟಿವೆ. ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಗೋಗಿ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.