ADVERTISEMENT

ಯಾದಗಿರಿ ಜಿಲ್ಲೆಯ ನಗನೂರ ದಾಸೋಹ ಮಠದ ಪೀಠ ತ್ಯಾಗ ಮಾಡಿದ ಶ್ರೀ ಶರಣಪ್ಪ ಶರಣರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 16:29 IST
Last Updated 7 ಫೆಬ್ರುವರಿ 2021, 16:29 IST
ಶರಣಪ್ಪ ಶರಣ
ಶರಣಪ್ಪ ಶರಣ   

ನಗನೂರ (ಕೆಂಭಾವಿ): ನಗನೂರ ಗ್ರಾಮದ ಶರಣಬಸವೇಶ್ವರ ದಾಸೋಹ ಮಠದ ಪೀಠಾಧಿಪತಿ ಶರಣಪ್ಪ ಶರಣ ಪೀಠ ತ್ಯಾಗ ಮಾಡಿದ್ದಾರೆ.

‘13 ವರ್ಷಗಳ ಕಾಲ ನಿರಂತರವಾಗಿ ಶರಣಬಸವೇಶ್ವರರ ಹಾಗೂ ಭಕ್ತರ ಸೇವೆ ಮಾಡಿದ ತೃಪ್ತಿ ನನಗಿದೆ. ವಯೋಸಹಜ ಕಾಯಿಲೆಗಳಿರುವ ಕಾರಣ ಮಠದ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪೀಠ ತ್ಯಾಗ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ನನಗೆ ನಾಲ್ಕು ಜನ ಗಂಡು ಮಕ್ಕಳಿದ್ದಾರೆ. ಅದರಲ್ಲಿ ಅರ್ಹರನ್ನು ದಾಸೋಹ ಮಠದ ಪೀಠಾಧಿಕಾರಿ, ಅರ್ಚಕ ಹಾಗೂ ಮಠದ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಬೇಕು ಎಂದು ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಭಕ್ತರಲ್ಲಿ ಆತಂಕ: ಕರ್ನಾಟಕ ಸೇರಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗೋವಾ ರಾಜ್ಯಗಳಲ್ಲಿ ಮಠದ ಭಕ್ತರಿದ್ದಾರೆ. ಈ ಬೆಳವಣಿಗೆಯಿಂದ ಅವರು ಆತಂಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.