
ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ದೀರ್ಘಕಾಲದ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ನಗರದಲ್ಲಿ ಮಂಗಳವಾರ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿದರು.
ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು ಸುಮಾರು 2 ಕ್ವಿಂಟಲ್ ಚಿಕನ್ ಬಿರಿಯಾನಿ ತಯಾರಿಸಿ ಜನರಿಗೆ ವಿತರಣೆ ಮಾಡಿದರು.
ಕೇಕ್ ಕತ್ತರಿಸಿದ ಶಾಸಕ: ನಗರದ ಶಾಸಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಅವರು ದೊಡ್ಡ ಕೇಕ್ ಕತ್ತರಿಸಿದರು. ಕೇಕ್ ಅನ್ನು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ತಿನಿಸಿದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲರ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಿಲೋಫರ್ ಬಾದಲ್, ಮುಖಂಡರಾದ ಸಿದ್ದಲಿಂಗರೆಡ್ಡಿ ಗೌಡ ಉಳ್ಳೆಸೂಗುರು, ಶರಣಪ್ಪಗೌಡ ಕೌಳೂರು, ಮರೆಪ್ಪ ಬಿಳ್ಳಾರ, ಶಾಮಸನ್ ಮಾಳಿಕೇರಿ, ಮಲ್ಲಿಕಾರ್ಜುನ ಈಟೆ, ಸಿದ್ದಪ್ರಕಾಶರಡ್ಡಿ ನಾಲವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.