
ಹುಣಸಗಿ: ‘12ನೇ ಶತಮಾನದಲ್ಲಿನ ಬಸವಾದಿ ಶರಣರಲ್ಲಿ ಶಿವಯೋಗಿ ಸಿದ್ದರಾಮೇಶ್ವರರು ಒಬ್ಬರು’ ಎಂದು ಭೋವಿ ಸಮಾಜದ ಮುಖಂಡ ನಾಗಯ್ಯ ಬಂಡಿವಡ್ಡರ ಹೇಳಿದರು.
ಹುಣಸಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದರು.
‘ಸೊಲ್ಲಾಪುರದಲ್ಲಿ ಭೋವಿ ಸಮುದಾಯದಲ್ಲಿ ಜನಿಸಿರುವ ಸಿದ್ಧರಾಮೇಶ್ವರ ಬಸವಣ್ಣ ನವರನ್ನೇ ತಂದೆ, ತಾಯಿ ಬಂಧು ಎಂದು ತಮ್ಮ ವಚನಗಳ ಮೂಲಕ ಅವರ ದರ್ಶನವನ್ನು ಮಾಡಿಸಿದ್ದಾರೆ. ಸಿದ್ಧರಾಮೇಶ್ವರ ಗುರುಭಕ್ತಿ ಹಾಗೂ ಸಮಾಜ ಮುಖಿ ಕಾರ್ಯ ನಮ್ಮೆಲ್ಲರಿಗೂ ಮಾದರಿಯಾಗಿದೆ’ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣನಾಯಕ ರಾಠೋಡ, ಸದಸ್ಯ ಮಲ್ಲು ಹೆಬ್ಬಾಳ, ನೀಲಕಂಠ ಹೊನಕಲ್ಲ, ಮುಖಂಡರಾದ ಗೋಪಾಲ ಹುಲಿಮನಿ, ದುರಗಪ್ಪ, ಹನುಮಂತ ಸೇರಿದಂತೆ ಇತರರು ಇದ್ದರು.
ಪಟ್ಟಣ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.