
ಕಕ್ಕೇರಾ: ಪಟ್ಟಣದ ಹೃದಯಭಾಗದಲ್ಲಿರುವ ಆರಾಧ್ಯ ದೈವ ಸೌರಾಷ್ಟ್ರ ಅಧಿಪತಿ ಸೋಮನಾಥ ದೇವರ ಜಾತ್ರ ಮಹೋತ್ಸವ ನಿಮಿತ್ತ ಜ. 15 ರಂದು ರಥೋತ್ಸವವು ಸಹಸ್ರಾರು ಭಕ್ತರ ನಡುವೆ ಜರುಗಲಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಮಕರ ಸಂಕ್ರಮಣದ ಜ.13 ರಿಂದ ಜ.23 ರವರೆಗೆ ಸುಮಾರು ಹತ್ತು ದಿನಗಳ ಕಾಲ ಜಾತ್ರ ಮಹೋತ್ಸವ ನಿಮಿತ್ತ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಈಗಾಗಲೇ ಜ.13ರಂದು ಕಳಸಾರೋಹಣದ ಮೂಲಕ ಜಾತ್ರೆಗೆ ಚಾಲನೆ ದೊರೆತಿದೆ. ಇಂದು ಗಂಗಾಸ್ಥಳ ಪೂಜೆ ಹಾಗೂ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ 65 ಅಡಿ ಎತ್ತರದ ರಥೋತ್ಸವ ಜರುಗಲಿದೆ.
ದೇವಸ್ಥಾನದ ಅಧ್ಯಕ್ಷರೂ ಹಾಗೂ ತಹಶೀಲ್ದಾರ್ ಎಚ್.ಎ. ಸರಕವಾಸ್ ಸಭೆ ನಡೆಸಿ ಜಾತ್ರಾ ಯಶಸ್ಸಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅದೇ ರೀತಿ ಟ್ರಾಫಿಕ್ ಸಮಸ್ಯೆ, ಅಹಿತಕರ ಘಟನೆ ಆಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೊಡೇಕಲ್ ಪಿಎಸ್ಐ ರಾಜಶೇಖರ ರಾಠೋಡ ಶಾಂತಿಸಭೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.