ADVERTISEMENT

ಕಕ್ಕೇರಾ: ಸೋಮನಾಥ ದೇವಾಲಯಕ್ಕೆ ಸಿಸಿ ಕ್ಯಾಮರಾ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 6:35 IST
Last Updated 13 ನವೆಂಬರ್ 2025, 6:35 IST
ಕಕ್ಕೇರಾ ಪಟ್ಟಣದ ಸೋಮನಾಥ ದೇವಾಲಯದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಯಿತು
ಕಕ್ಕೇರಾ ಪಟ್ಟಣದ ಸೋಮನಾಥ ದೇವಾಲಯದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಯಿತು   

ಕಕ್ಕೇರಾ: ಭಕ್ತರ ಆರಾಧ್ಯಧೈವ ಸೋಮನಾಥ ದೇವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಒಟ್ಟು 08 ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ನಂತರ ಉಪ ತಹಶೀಲ್ದಾರ್ ರೇವಪ್ಪ ತೆಗ್ಗಿಮನಿ ಮಾತನಾಡಿ, ‘ಮುಂಬರುವ ಜಾತ್ರೆ ಹಾಗೂ ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ’ ಎಂದು ತಿಳಿಸಿದರು.

ಅಯ್ಯಣ್ಣ ಪೂಜಾರಿ, ಕಂದಾಯ ನಿರೀಕ್ಷಕ ಮಲಕಾಜಪ್ಪ, ಗ್ರಾಮಲೆಕ್ಕಾಧಿಕಾರಿ ಬಸವರಾಜ ಶೆಟ್ಟಿ, ಗ್ರಾಮ ಸಹಾಯಕ ಅಲ್ಲಾಭಕ್ಷ ಶ್ಯಾನಿ, ಮದನಸಾಬ ಗ್ರಾಮಸ್ಥರು ಇದ್ದರು.

ADVERTISEMENT

ಅಧಿಕಾರಿಗಳ ಮೇಲೆ ಆಕ್ರೋಶ: ‘ಸುಮಾರು ವರ್ಷಗಳಿಂದ ಕಂದಾಯ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದು, ಲಕ್ಷಾಂತರ ರೂಪಾಯಿ ಮೂರ್ತಿಗಳು ದೇಗುಲದಲ್ಲಿದ್ದರೂ ಇಷ್ಟು ವರ್ಷ ಯಾಕೆ ಸಿಸಿ ಕ್ಯಾಮರಾ ಅಳವಡಿಸಿಲ್ಲ. ಕಳುವು ಆದ ನಂತರ ಸಿಸಿ ಕ್ಯಾಮರಾ ಅಳವಡಿಸಿದ್ದು, ಅಧಿಕಾರಿಗಳ ಕಾರ್ಯವೈಖರಿ ತೋರಿಸುತ್ತದೆ’ ಎಂದು ಮುಖಂಡ ಪರಮಣ್ಣ ವಡಿಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.