ನಾರಾಯಣಪುರ: ಸಮೀಪದ ಚೆಕ್‌ಪೋಸ್ಟ್ ಬಳಿಯ ಪವಾಡ ಬಸವೇಶ್ವರ ದೇಗುಲದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ದಾ ಭಕ್ತಿಯಿಂದ ನೆರವೇರಿದವು.
ಬೆಳಿಗ್ಗೆ ದೇವಸ್ಥಾನ ಎಲ್ಲ ಮೂರ್ತಿಗೆ ಅರ್ಚಕ ಈರಯ್ಯಸ್ವಾಮಿ ಅವರು ಪಂಚಾಮೃತ ಅಭಿಷೇಕ ಮಾಡಿದರು.
ನಂತರ ಬಸಯ್ಯ ಶರಣರ ನೇತೃತ್ವದಲ್ಲಿ ಭಕ್ತರು ಸಮೀಪದ ಕೃಷ್ಣಾ ನದಿ ತೀರದ ಛಾಯಾ ಭಗವತಿ ಕ್ಷೇತ್ರಕ್ಕೆ ತೆರಳಿ ಗಂಗಾಪೂಜೆ, ಬಾಗಿನ ಅರ್ಪಿಸಿದರು. ಸುತ್ತಮುತ್ತನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು ಪ್ರಸಾದ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.