ADVERTISEMENT

ಕಾಳಿಕಾದೇವಿ ಮೂರ್ತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 16:26 IST
Last Updated 31 ಜುಲೈ 2020, 16:26 IST
ಯಾದಗಿರಿ ಸಮೀಪದ ನಾಯ್ಕಲ್ ಗ್ರಾಮದ ಕಾಳಿಕಾದೇವಿ ದೇವಸ್ಥಾನದಲ್ಲಿ ನೂತನ ಕಾಳಿಕಾದೇವಿ ಮೂರ್ತಿಯನ್ನು ಶುಕ್ರವಾರ ಪ್ರತಿಷ್ಠಾಪನೆ ಮಾಡಲಾಯಿತು
ಯಾದಗಿರಿ ಸಮೀಪದ ನಾಯ್ಕಲ್ ಗ್ರಾಮದ ಕಾಳಿಕಾದೇವಿ ದೇವಸ್ಥಾನದಲ್ಲಿ ನೂತನ ಕಾಳಿಕಾದೇವಿ ಮೂರ್ತಿಯನ್ನು ಶುಕ್ರವಾರ ಪ್ರತಿಷ್ಠಾಪನೆ ಮಾಡಲಾಯಿತು   

ಯಾದಗಿರಿ: ಇಲ್ಲಿಗೆ ಸಮೀಪದ ನಾಯ್ಕಲ್ ಗ್ರಾಮದ ಕಾಳಿಕಾದೇವಿ ದೇವಸ್ಥಾನದಲ್ಲಿ ನೂತನ ಕಾಳಿಕಾದೇವಿ ಮೂರ್ತಿ ಪ್ರತಿಷ್ಠಾಪನೆಯನ್ನು ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಪೂಜೆ ಪುನಸ್ಕಾರ ಹೋಮ ಹವನ, ಕ್ಷೀರಾಭಿಷೇಕಗಳೊಂದಿಗೆ ಸರಳವಾಗಿ ನಡೆಯಿತು.

ಶಹಾಪುರದಿಂದ ನಾಯ್ಕಲ್ ಗ್ರಾಮಕ್ಕೆ ಗುರುವಾರ ನೂತನ ಕಾಳಿಕಾದೇವಿ ಮೂರ್ತಿಯನ್ನು ತರಲಾಯಿತು. ನಂತರ ಸಮೀಪದ ನೂತನ ಮೂರ್ತಿಯನ್ನು ಭೀಮಾ ನದಿಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಗಂಗಾಸ್ನಾನ, ಪೂಜೆ ಪುನಸ್ಕಾರಗಳು, ಹೋಮ ಹವನ, ಕಳಸ ಹೊತ್ತ 5 ಜನ ಮುತ್ತೈದೆಯರು ಕಾಳಿಕಾದೇವಿ ದೇವಸ್ಥಾನಕ್ಕೆ ತಲುಪಿಸಲಾಯಿತು.

ಕಾಳಿಕಾದೇವಿ ದೇಸ್ಥಾನದಲ್ಲಿ ಗುರುವಾರ ಸಂಜೆ, ನೂತನ ವಿಗ್ರಹಕ್ಕೆ ಪೂಜೆ ಪುನಸ್ಕಾರಗಳು, ರಾತ್ರಿ ಹೋಮ ಹವನ, ಕ್ಷೀರಾಭಿಷೇಕ ನಡೆದವು. ಶುಕ್ರವಾರ ಏಕದಂಡಿಗಿ ಮಠ ಶಹಾಪುರದ ಕಾಳಹಸ್ತೇಂದ್ರ ಸ್ವಾಮೀಜಿ ವಿಶ್ವಕರ್ಮ ಹಾಗೂ ಯಾದಗಿರಿಯ ಏಕದಂಡಿಗಿ ಮಠದ ಶ್ರೀನಿವಾಸ ಸ್ವಾಮೀಜಿ ವಿಶ್ವಕರ್ಮ ಸಾನ್ನಿಧ್ಯದಲ್ಲಿ ನೂತನ ಕಾಳಿಕಾದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

ADVERTISEMENT

ಗ್ರಾಮದ ಪ್ರಮುಖರಾದ ಉಮಾರೆಡ್ಡಿಗೌಡ, ನಿವೃತ್ತ ಮುಖ್ಯಶಿಕ್ಷಕ ಭೀಮರೆಡ್ಡಿ ಮಾಯಿ, ಪರಮಣ್ಣ ನೀಡಿಗಿ, ಸಿದ್ದಿಲಿಂಗರೆಡ್ಡಿ ಹಳಿಮನಿ, ಶೇಖರೆಡ್ಡಿ ಮಾಯಿ, ಡಾ. ಬಲವಂತರೆಡ್ಡಿ, ವೀರಣ್ಣ ಪತ್ತಾರ, ಬಸವಂತ್ರಾಯಗೌಡ ಪಸಪುಲ್‌, ಕಂಟೆಪ್ಪಗೌಡ ಪಸಪುಲ್, ಬಸವರಾಜ ವಿಶ್ವಕರ್ಮ, ಶರಣಪ್ಪ, ಶರಣಗೌಡ ಪಸಪುಲ್‌, ಸಿದ್ದಣ್ಣ ಬಡಿಗೇರ್, ಪರ್ವತರೆಡ್ಡಿ, ಮಹಾದೇವರೆಡ್ಡಿ, ಮೌನೇಶ ಪತ್ತಾರ, ಮಲ್ಲಣ್ಣ ಪತ್ತಾರ, ರಾಜಶೇಖರ ಪತ್ತಾರ ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.