ADVERTISEMENT

ಸಂಗನಗೌಡ ಪಾಟೀಲ ರೈತಪರ ಹೋರಾಟಗಾರ; ಶರಣಬಸಪ್ಪಗೌಡ

​ಪ್ರಜಾವಾಣಿ ವಾರ್ತೆ
Published 13 ಮೇ 2022, 2:47 IST
Last Updated 13 ಮೇ 2022, 2:47 IST
ಹುಣಸಗಿಯ ವಜ್ಜಲ ಗ್ರಾಮದಲ್ಲಿ ರೈತ ಮುಖಂಡ ದಿ.ಸಂಗನಗೌಡ ಪಾಟೀಲ ಅವರ ಮೂರ್ತಿ ಅನಾವರಣ, ಪುಣ್ಯ ಸ್ಮರಣೆ ಕಾರ್ಯಕ್ರವನ್ನು ಶಾಸಕ ರಾಜೂಗೌಡ ಉದ್ಘಾಟಿಸಿದರು. ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಇತರರು ಇದ್ದರು
ಹುಣಸಗಿಯ ವಜ್ಜಲ ಗ್ರಾಮದಲ್ಲಿ ರೈತ ಮುಖಂಡ ದಿ.ಸಂಗನಗೌಡ ಪಾಟೀಲ ಅವರ ಮೂರ್ತಿ ಅನಾವರಣ, ಪುಣ್ಯ ಸ್ಮರಣೆ ಕಾರ್ಯಕ್ರವನ್ನು ಶಾಸಕ ರಾಜೂಗೌಡ ಉದ್ಘಾಟಿಸಿದರು. ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಇತರರು ಇದ್ದರು   

ಹುಣಸಗಿ: ಎಲ್ಲ ಸಮುದಾಯದವರನ್ನು ತನ್ನವರು ಎಂಬ ಸಾಮಾಜಿಕ ಕಳಕಳಿ ಹೊಂದಿದ್ದ ದಿ.ಸಂಗನಗೌಡ ಪಾಟೀಲ ಅವರು ನೇರ, ನಿಷ್ಠುರ ನುಡಿಯ ಮೃದು ಮನಸ್ಸಿನ ಸಹೃದಯಿ ಆಗಿದ್ದರು ಎಂದು ಸುರಪುರ ಶಾಸಕ ರಾಜೂಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ರೈತ ಮುಖಂಡ ದಿ.ಸಂಗನಗೌಡ ಪಾಟೀಲ ವಜ್ಜಲ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಸಂಗನಗೌಡ ಪಾಟೀಲರದ್ದು ಜನಸಾಮಾನ್ಯರ ಜತೆ ಬೆರೆಯುವ ಸರಳ ವ್ಯಕ್ತಿತ್ವ. ರೈತಪರ ನಿಲುವುಳ್ಳ ಉತ್ತಮ ಹೋರಾಟಗಾರ. ರೈತರಿಗೆ ಯಾವುದೇ ಸಮಸ್ಯೆಗಳು ಎದುರಾದಲ್ಲಿ ತಮ್ಮದೇ ಶೈಲಿಯಲ್ಲಿ ಹೋರಾಟ ನಡೆಸುತ್ತಿದ್ದರು ಎಂದು ಸ್ಮರಿಸಿದರು.

ADVERTISEMENT

ಸಾನಿಧ್ಯ ವಹಿಸಿದ್ದ ದೇವಪುರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಹಾಗೂ ಕುಂಟೋಜಿಯ ಚನ್ನವೀರ ದೇವರು ಮಾತನಾಡಿ, ಕುಟುಂಬಕ್ಕಾಗಿ ಬದುಕುವದು ಸಹಜ. ಆದರೆ, ಸಮಾಜ ಹಾಗೂ ತುಳಿತಕ್ಕೆ ಒಳಗಾದವರ ಹಿತಕ್ಕಾಗಿ ಬದುಕುವ ಮೂಲಕ ಸಂಗನಗೌಡ ಅವರು ಸಾರ್ಥಕ ಜೀವನ ನಡೆಸಿದ್ದರು ಎಂದು ಹೇಳಿದರು.

ಕೊಡೇಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ದೇವರು, ಮುದ ನೂರಿನ ಕಂಠಿಮಠದ ಚನ್ನ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ, ರುಕ್ಮಾಪುರದ ಗುರುರಶಾಂತ ಮೂರ್ತಿ ಶಿವಾಚಾರ್ಯರು, ಕೂಡಲಗಿಯ ಗಜಾನನ ಮಹಾರಾಜರು, ಶರಣ ಸಣ್ಣಕೆಪ್ಪ ಮುತ್ಯಾ ಬಂಡೆಪ್ಪನಹಳ್ಳಿ, ಇಂಗಳಗೇರಿಯ ಅಡವೆಯ್ಯ ಸ್ವಾಮೀಜಿ ಇದ್ದರು.

ಜಿ.ಪಂ ಮಾಜಿ ಅಧ್ಯಕ್ಷ ರಾಜ ಶೇಖರಗೌಡ ಪಾಟೀಲ ವಜ್ಜಲ್ ಅಧ್ಯ ಕ್ಷತೆ ವಹಿಸಿದ್ದರು. ಉದ್ಯಮಿ ಎಸ್.ಪಿ. ದಯಾನಂದ ರಾಜಾ ಹನು ಮಪ್ಪ ನಾಯಕ ತಾತಾ, ಜಿ.ಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿ ಯಾಪುರ,ಜಿ.ಪಂ ಮಾಜಿ ವಿಪಕ್ಷ ನಾಯಕ ಎಚ್.ಸಿ ಪಾಟೀಲ್, ಸುರೇಶ ಸಜ್ಜನ್, ವಕೀಲ ಬಸವಲಿಂಗಪ್ಪ ಪಾಟೀಲ, ಬಾಬುಗೌಡ ಪಾಟೀಲ, ಬಸನ ಗೌಡ ಮಾಡಗಿ ಇದ್ದರು. ಸಂಜು ಗೌಡ ಪಾಟೀಲ ಸ್ವಾಗತಿಸಿ ದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂ ಪಿಸಿದರು, ಸಂಗನ ಗೌಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.