ADVERTISEMENT

ಶಹಾಪುರ: 17 ದ್ವಿಚಕ್ರ ವಾಹನ, ₹88 ಸಾವಿರ ನಗದು ವಶ

ಇಸ್ಪೀಟ್ ಅಡ್ಡೆ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 10:12 IST
Last Updated 6 ಜನವರಿ 2020, 10:12 IST
ಶಹಾಪುರ ತಾಲ್ಲೂಕಿನ ಗೋಗಿ ಠಾಣೆಯ ಪೊಲೀಸರು ಭಾನುವಾರ ಇಸ್ಪೀಟ್ ಆಟದ ಅಡ್ಡೆಯ ಮೇಲೆ ದಾಳಿ ನಡೆಸಿ 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಶಹಾಪುರ ತಾಲ್ಲೂಕಿನ ಗೋಗಿ ಠಾಣೆಯ ಪೊಲೀಸರು ಭಾನುವಾರ ಇಸ್ಪೀಟ್ ಆಟದ ಅಡ್ಡೆಯ ಮೇಲೆ ದಾಳಿ ನಡೆಸಿ 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.   

ಶಹಾಪುರ:ತಾಲ್ಲೂಕಿನ ಗೋಗಿ ಗ್ರಾಮದ ಚಂದಾಪುರ ತಾಂಡಾದ ಹತ್ತಿರ ಶನಿವಾರ ಇಸ್ಪೀಟ್ ಆಟದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ 17 ದ್ವಿಚಕ್ರ ವಾಹನ ಮತ್ತು ₹88 ಸಾವಿರ ಜಪ್ತಿ ಮಾಡಿದ್ದಾರೆ.

ಗೋಗಿ ಠಾಣೆಯ ಪಿಎಸ್ಐ ಸೋಮಲಿಂಗಪ್ಪ ಒಡೆಯರ ನೇತೃತ್ವದಲ್ಲಿ ತಾಲ್ಲೂಕಿನ ಚಂದಾಪುರ ತಾಂಡಾದಲ್ಲಿ ದಾಳಿ ನಡೆಸಿದಾಗ ಆಟ ಆಡುತ್ತಿದ್ದವರು ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ವಾಹನ ಮಾಲೀಕರು ವಾಹನ ಬಿಡಿಸಿಕೊಳ್ಳಲು ಆಗಮಿಸಿದಾಗ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.