ADVERTISEMENT

ಶಹಾಪುರ | ‘ಪ್ರತಿಭೆ ಗುರುತಿಸಲು ಕಾರಂಜಿ ಸೂಕ್ತ ವೇದಿಕೆ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 7:11 IST
Last Updated 6 ಡಿಸೆಂಬರ್ 2025, 7:11 IST
5ಎಸ್ ಎಚ್ ಪಿ1:ಶಹಾಪುರ ನಗರದ ದಕ್ಷಿಣ ಭಾಗದ ಕ್ಲಸ್ಟರ್ನ ಪ್ರಾಥಮಿಕ, ಪ್ರೌಢಶಾಲೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿವಿಧ ವೇಷಧಾರಿಗಳು ಗಮನ ಸೆಳೆದರು
5ಎಸ್ ಎಚ್ ಪಿ1:ಶಹಾಪುರ ನಗರದ ದಕ್ಷಿಣ ಭಾಗದ ಕ್ಲಸ್ಟರ್ನ ಪ್ರಾಥಮಿಕ, ಪ್ರೌಢಶಾಲೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿವಿಧ ವೇಷಧಾರಿಗಳು ಗಮನ ಸೆಳೆದರು   

ಶಹಾಪುರ: ‘ಮಕ್ಕಳ ಪ್ರತಿಭೆಯನ್ನು ಒರೆಗೆ ಹಚ್ಚುವ ಕಾರ್ಯಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಪ್ರತಿಭಾನ್ವೇಷಣೆಯೇ ಪ್ರತಿಭಾ ಕಾರಂಜಿಯಾಗಿದೆ’ ಎಂದು ಬಿಇಒ ವೈ.ಎಸ್. ಹರಗಿ ತಿಳಿಸಿದರು.

ನಗರದ ಹಳಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಕ್ಷಿಣ ಭಾಗದ ಕ್ಲಸ್ಟರ್‌ನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿಭಾ ಕಾರಂಜಿಯು ಮಕ್ಕಳ ಹಬ್ಬವಾಗಿದೆ. ಶಿಕ್ಷಕರು, ಪೋಷಕರು, ಸಾರ್ವಜನಿಕರು ಕಣ್ತುಂಬಿಕೊಂಡು ಸಂತಸ ಪಡುವಂಥ ಕ್ಷಣವನ್ನು ಕಾಣಬಹುದು. ನಿಜವಾದ ಪ್ರತಿಭೆಗಳನ್ನು ಗುರುತಿಸಿ, ರಾಜಮಟ್ಟಕ್ಕೆ ಕಳುಹಿಸುವುದು ಸರ್ವರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ADVERTISEMENT

ಕ್ಷೇತ್ರ ಸಮನ್ವಯ ಅಧಿಕಾರಿ ಅಮರೇಶ ಮಾತನಾಡಿ, ‘ವಿದ್ಯಾರ್ಥಿಗಳು ಪಾಠವನ್ನು ಚೆನ್ನಾಗಿ ಕಲಿಯುವುದಲ್ಲದೆ, ಮನನ ಮಾಡಬೇಕು. ಸಹಪಾಠಿಗಳ ಎದುರು ಪ್ರದರ್ಶನ ಮಾಡುವುದು, ಅನೇಕ ಗುಣಗಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ’ ಎಂದು ತಿಳಿಸಿದರು.

ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಲಾಳಸೇರಿ, ಮುಖ್ಯಶಿಕ್ಷಕಿ ಗೋವಿಂದಮ್ಮ, ಶಿಕ್ಷಣ ಸಂಯೋಜಕ ಸಿದ್ಧರಾಮಪ್ಪ, ನಿಂಗನಗೌಡ ಕಲಾಲ, ಜಮಿಗೊಟ್ಲಾ, ಆನಂದ ಸ್ವಾಮಿ ನಾಯಕ, ಮಲ್ಲನಗೌಡ, ಶಮ್ಸ್ ಶಾಲೆಯ ಲೋಕೇಶ, ಸಂಸ್ಕಾರ ಅಕಾಡೆಮಿಯ ಲಕ್ಷ್ಮಿ ಬಸಮ್ಮ ಪಾಟೀಲ, ಸಿಆರ್‌ಪಿ ವೀರಭದ್ರಯ್ಯ ಭಾಗವಹಿಸಿದ್ದರು.

ನಗರ ದಕ್ಷಿಣ ಭಾಗದ ಶಾಲೆ ಮುಖ್ಯಸ್ಥರು, ಸ್ಪರ್ಧೆಗಳ ನಿರ್ಣಾಯಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿಧ ವೇಶದಾರಿ ವಿದ್ಯಾರ್ಥಿಗಳು ಸರ್ವರ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.