ADVERTISEMENT

ಸುರಪುರ ನಗರಸಭೆ: ಬಿಜೆಪಿಯ ಸುಜಾತಾ ವೇಣುಗೋಪಾಲ್ ಜೇವರ್ಗಿ ಅಧ್ಯಕ್ಷೆ

ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 8:04 IST
Last Updated 29 ಅಕ್ಟೋಬರ್ 2020, 8:04 IST
ಸುರಪುರ ನಗರಸಭೆಯ ಅಧ್ಯಕ್ಷರಾಗಿ ಸುಜಾತಾ ವೇಣುಗೋಪಾಲ್‌ ಜೇವರ್ಗಿ, ಉಪಾಧ್ಯಕ್ಷರಾಗಿ ಮಹೇಶ್ ಪಾಟೀಲ ಗುರುವಾರ ಅವಿರೋಧ ಆಯ್ಕೆಯಾದರು
ಸುರಪುರ ನಗರಸಭೆಯ ಅಧ್ಯಕ್ಷರಾಗಿ ಸುಜಾತಾ ವೇಣುಗೋಪಾಲ್‌ ಜೇವರ್ಗಿ, ಉಪಾಧ್ಯಕ್ಷರಾಗಿ ಮಹೇಶ್ ಪಾಟೀಲ ಗುರುವಾರ ಅವಿರೋಧ ಆಯ್ಕೆಯಾದರು   
""

ಸುರಪುರ (ಯಾದಗಿರಿ ಜಿಲ್ಲೆ): ಸುರಪುರ ನಗರಸಭೆಯ ಅಧ್ಯಕ್ಷರಾಗಿ ವಾರ್ಡ್‌ ಸಂಖ್ಯೆ 6ರ ಸುಜಾತಾ ವೇಣುಗೋಪಾಲ್ ಜೇವರ್ಗಿ, ಉಪಾಧ್ಯಕ್ಷರಾಗಿ ವಾರ್ಡ್‌ ಸಂಖ್ಯೆ 11ರ ಮಹೇಶ್ ಪಾಟೀಲ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಇಬ್ಬರು ಬಿಜೆಪಿ ಸದಸ್ಯರು.

ಸುರಪುರ ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು, ಬಿಜೆಪಿ 16, ಕಾಂಗ್ರೆಸ್‌ 15 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಚುನಾವಣಾಧಿಕಾರಿಯಾಗಿದ್ದರು.

ಸುರಪುರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT