ADVERTISEMENT

ಸುರಪುರ| ಕಾಯಕ ಶರಣರ ದಾರಿಯಲ್ಲಿ ಸಾಗೋಣ: ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:02 IST
Last Updated 11 ಫೆಬ್ರುವರಿ 2026, 7:02 IST
ಸುರಪುರದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಕಾಯಕ ಶರಣರ ಜಯಂತ್ಯುತ್ಸವ ಜರುಗಿತು 
ಸುರಪುರದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಕಾಯಕ ಶರಣರ ಜಯಂತ್ಯುತ್ಸವ ಜರುಗಿತು    

ಸುರಪುರ: ‘ಕಾಯಕ ಶರಣರು ತಮ್ಮ ಕಾಯಕದಿಂದ ಗುರುತಿಸಿ ಕೊಂಡುವರು. ಅವರ ನಡೆ-ನುಡಿ ಒಂದಾಗಿದ್ದವು. ಜಾತಿ, ಮತ, ಪಂಥ, ಮೇಲು-ಕೀಳು ಎನ್ನದೆ ಕಾಯಕ ಮಾಡಿದವರು’ ಎಂದು ತಹಶೀಲ್ದಾರ್ ಎಚ್.ಎ. ಸರಕಾವಸ ಹಳಿದರು.

ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕಾಡಳಿತ ಮಂಗಳವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತ್ಯುಂತ್ಸವದಲ್ಲಿ ಅವರು ಮಾತನಾಡಿದರು.

‘ಕಾಯಕ ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ ಹಾಗೂ ಸಮಗಾರ ಹರಳಯ್ಯ ನಮಗೆಲ್ಲ ಆದರ್ಶ’ ಎಂದರು.

ADVERTISEMENT

ದಲಿತ ಮುಖಂಡ ಹಣಮಂತ ಬೊಮ್ಮನಳ್ಳಿ ಉಪನ್ಯಾಸ ನೀಡಿ, ‘ಕಾಯಕ ಶರಣರು ಸಮಾಜದಲ್ಲಿ ಬೇರೂರಿದ್ದ ಕಂದಾಚಾರ, ಮೂಢನಂಬಿಕೆ ಇನ್ನಿತರ ಸಾಮಾಜಿಕ ಮೌಢ್ಯಗಳನ್ನು ತೊಲಗಿಸಲು ಶ್ರಮಿಸಿದರು. ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು’ ಎಂದರು.

ವಕೀಲ ಯಲ್ಲಪ್ಪ ಹುಲಿಕಲ್ ಮಾತನಾಡಿ, ‘ಕಾಯಕ ಶರಣರು ತಮ್ಮ ವಚನಗಳಲ್ಲಿ ಕಾಯಕ ನಿಷ್ಠೆ, ಮಾನವೀಯ ಮೌಲ್ಯಗಳು, ಒಳ್ಳೆಯ ಆಚಾರ, ವಿಚಾರಗಳನ್ನು ಮಾನವ ಜನಾಂಗಕ್ಕೆ ನೀಡಿದ್ದಾರೆ’ ಎಂದರು.

ನಗರಸಭೆ ನಾಮ ನಿರ್ದೇಶಿತ ಸದಸ್ಯ ಪ್ರಕಾಶ್ ಅಲಬನೂರ್ ಮಾತನಾಡಿ ಮಾತನಾಡಿದರು.

ಮುಖಂಡರಾದ ದಾನಪ್ಪ ಕಡಿಮನಿ ಲಕ್ಷ್ಮೀಪುರ, ಭೀಮಣ್ಣ ಬಿಲ್ಲವ್, ನಿಂಗಣ್ಣ ದಿವಳಗುಡ್ಡ, ಬಸವರಾಜ ಮುಷ್ಟಳ್ಳಿ (ಡಿಸಿ), ಚಂದ್ರು ದಿವಳಗುಡ್ಡ, ಸೋಮು, ಮಹೇಶ್ ಜಾಲಿಬೆಂಚಿ, ಮರೆಪ್ಪ ದೇವಾಪುರ ಭಾಗವಹಿಸಿದ್ದರು. ಶಿಕ್ಷಕ ಮಹಾದೇವಪ್ಪ ಗುತ್ತೇದಾರ್ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.