ಸುರಪುರ: ತಂತ್ರಜ್ಞಾನ ಆಧಾರಿತ ಶವಪೆಟ್ಟಿಗೆ, ಶ್ರದ್ಧಾಂಜಲಿ ವಾಹನ ಮತ್ತು ಸಾಮೂಹಿಕ ವಿದ್ಯುತ್ ಚಿತಾಗಾರದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆಯ ಪದಾಧಿಕಾರಿಗಳು ಗುರುವಾರ ನಗರಸಭೆ ಪೌರಾಯುಕ್ತ ಜೀವನ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು.
ಜಯ ಕರ್ನಾಟಕ ರಕ್ಷಣಾ ಸೇನೆಯ ಮುಖಂಡರು ಮಾತನಾಡಿ, ‘ನಗರದಲ್ಲಿ ತಂತ್ರಜ್ಞಾನದ ಶವಪೆಟ್ಟಿಗೆ, ಶ್ರದ್ಧಾಂಜಲಿ ವಾಹನ ಮತ್ತು ಸಾಮೂಹಿಕ ವಿದ್ಯುತ್ ಚಿತಾಗಾರದ ವ್ಯವಸ್ಥೆ ಇರುವುದಿಲ್ಲ. ಪಾರ್ಥಿವ ಶರೀರವನ್ನು ಸ್ಮಶಾನದವರೆಗೆ ಸಾಗಿಸುವುದಕ್ಕೆ ಬಡ ಜನರು ಪರದಾಡುವ ಸ್ಥಿತಿಯಿದೆ. ಕಾರಣ ಈ ವ್ಯವಸ್ಥೆಯನ್ನು ನಗರಸಭೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.
ರಕ್ಷಣಾ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಕಬಾಡಗೇರಾ, ಕಾರ್ಯಾಧ್ಯಕ್ಷ ಶಿವರಾಜ ವಗ್ಗರ, ನಗರ ಘಟಕದ ಅಧ್ಯಕ್ಷ ಶಿವಕುಮಾರ ಗಾಜಲದಿನ್ನಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.