ADVERTISEMENT

ಸುರಪುರ: ಶೋಷಿತರ ಸಂಘಟನೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 7:43 IST
Last Updated 26 ಆಗಸ್ಟ್ 2025, 7:43 IST
ಸುರಪುರ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದವರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ಸುರಪುರ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದವರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ಸುರಪುರ: ‘ನಗರದ ಪ್ರಭು ಕಾಲೇಜಿನ ಸ್ಥಳದ ದಾಖಲೆಗಳನ್ನು ನೋಡಿ ಕ್ರಮ ಕೈಗೊಳ್ಳಬೇಕು’ ಎಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದವರು ಸೋಮವಾರ ಪ್ರತಿಭಟನೆ ನಡೆಸಿದರು.

ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ‘ಕಾಲೇಜಿನ ಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ದಿನಗಳಿಂದ ಒಂದು ಕಡೆ ಜಾತಿ ಮಧ್ಯ ವೈಮನಸ್ಸು, ಇನ್ನೊಂದು ಕಡೆ ನಿರಂತರ ಧರಣಿ ನಡೆಯುತ್ತಿದೆ’ ಎಂದು ತಿಳಿಸಿದರು.

‘ಶಾಸಕರು ಮತ್ತು ತಹಶೀಲ್ದಾರ್ ಅವರು ಕಾಲೇಜಿನ ದಾಖಲೆ ನೋಡಿ ಎರಡು ಗುಂಪಿನ ಸಮಕ್ಷಮದಲ್ಲಿ ಸರ್ವೆ ಮಾಡಿಸಬೇಕು. ಅಂದರೆ ಮಾತ್ರ ಸ್ಥಳದ ಬಗ್ಗೆ ಗೊತ್ತಾಗುತ್ತದೆ. ಸುಮ್ಮನೆ ಇದ್ದರೆ ಪ್ರಕರಣ ದೊಡ್ಡದಾಗುತ್ತಾ ಹೋಗುತ್ತದೆ. ಕಾರಣ ಪ್ರಕರಣದ ಕಡೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ದರಬಾರಿ ಸೇರಿ ಇತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.