
ಸುರಪುರ: ‘ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಅವರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಾಜಕೀಯ ಶಕ್ತಿಯನ್ನು ಹೆಚ್ಚಿಸುವ ಮುಖ್ಯ ಉದ್ದೇಶ ‘ಅಹಿಂದ’ ಸಂಘಟನೆ ಹೊಂದಿದೆ’ ಎಂದು ಹಿರಿಯ ಮುಖಂಡ ಮಲ್ಲಯ್ಯ ಕಮತಗಿ ಹೇಳಿದರು.
ನಗರದ ಟೇಲರ್ ಮಂಜಿಲ್‍ದಲ್ಲಿ ಸೋಮವಾರ ಅಹಿಂದ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.
‘ಈ ಸಂಘಟನೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ವಗಳ ಆಧಾರದ ಮೇಲೆ ರೂಪಗೊಂಡಿದೆ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ’ ಎಂದು ತಿಳಿಸಿದರು.
ಮುಖಂಡ ಅಹ್ಮದ್ ಪಠಾಣ ಮಾತನಾಡಿ, ‘ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಒಕ್ಕಟ್ಟಾಗಿ ಹೋರಾಟ ಮಾಡಿದರೆ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು’ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಮಾನಪ್ಪ ಸುಗೂರ ಮಾತನಾಡಿ, ‘ಸಂಘಟನೆ ಬಲಪಡಿಸಿದಷ್ಟು ನಮಗೆ ಉತ್ತಮ. ಈಗ ಸಂಘಟನೆ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಹರಡಿದೆ. ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ’ ಎಂದರು.
ಚಂದಪ್ಪ ಯಾದವ, ವೆಂಕಟೇಶ ಹೊಸಮನಿ, ಬಸವರಾಜ ಮಾಲಿಪಾಟೀಲ, ಮೌನೇಶ ದೇವಡಿ, ಯಂಕಪ್ಪ ಪರಾಸಿ, ಬಿ. ಗುರಪ್ಪ ಇತರರು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳು: ಮಾನಪ್ಪ ಸುಗೂರ (ಅಧ್ಯಕ್ಷ), ಶ್ರೀನಿವಾಸ ಪಾಟೀಲ, ಮಲ್ಲಿಕಾರ್ಜುನ ಸಾಹುಕಾರ (ಉಪಾಧ್ಯಕ್ಷರು), ರಾಹುಲ ಹುಲಿಮನಿ (ಪ್ರಧಾನ ಕಾರ್ಯದರ್ಶಿ), ಮಡಿವಾಳಪ್ಪ ಬಿಜಾಸಪುರ, ನಿಂಗಣ್ಣ ಗೋನಾಲ, ಗುರಣ್ಣ ಸಾಹುಕಾರ, ವೆಂಕಣ್ಣ ಯಾದವ (ಕಾರ್ಯದರ್ಶಿಗಳು), ದಾವುದ್ ಪಠಾಣ (ಖಜಾಂಚಿ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.