ADVERTISEMENT

ಯಾದಗಿರಿ: ನದಿ ತೀರಕ್ಕೆ ತಹಶೀಲ್ದಾರ್ ಭೇಟಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 16:45 IST
Last Updated 7 ಆಗಸ್ಟ್ 2020, 16:45 IST
ನೀಲಕಂಠರಾಯನಗಡ್ಡಿ ತೀರವನ್ನು ತಹಶೀಲ್ದಾರ್‌ ನಿಂಗಣ್ಣ ಪರಿಶೀಲಿಸಿದರು
ನೀಲಕಂಠರಾಯನಗಡ್ಡಿ ತೀರವನ್ನು ತಹಶೀಲ್ದಾರ್‌ ನಿಂಗಣ್ಣ ಪರಿಶೀಲಿಸಿದರು   

ಕಕ್ಕೇರಾ: ಪ್ರವಾಹ ಪೀಡಿತ ನೀಲಕಂಠರಾಯನ(ನಡು)ಗಡ್ಡಿ ಹಾಗೂ ತಿಂಥಣಿ ಕೃಷ್ಣಾನದಿಯ ತೀರಕ್ಕೆ ಶುಕ್ರವಾರ ತಹಶೀಲ್ದಾರ್ ನಿಂಗಣ್ಣ ಬಿರಾದಾರ ಭೇಟಿ ಪರಿಸ್ಥಿತಿ ಅವಲೋಕಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರದಲ್ಲಿ ಅಪಾರ ಪ್ರಮಾಣದ ಮಳೆ ಸುರಿಯುತ್ತಿದ್ದು, ಆಲಮಟ್ಟಿ ಜಲಾಶಯದ ಮೂಲಕ ನಾರಾಯಣಪುರ ಜಲಾಶಯಕ್ಕೆ ಅಪಾರ ಪ್ರಮಾಣ ನೀರು ಕೃಷ್ಣಾನದಿ ಮೂಲಕ ಹರಿಬಿಡುತ್ತಿರುವುದರಿಂದ ಕೃಷ್ಣಾನದಿಗೆ ಪ್ರವಾಹ ಉಂಟಾಗಿದೆ. ಈ ಸಂದರ್ಭದಲ್ಲಿ ಮೀನುಗಾರರು ಸೇರಿದಂತೆ ನದಿತೀರದ ನಿವಾಸಿಗಳು ಯಾವುದೇ ಕಾರಣಕ್ಕೂ ಈಜುವ ದುಸ್ಸಾಹಸಕ್ಕೆ ಮುಂದಾಗಬಾರದು. ಒಂದು ವೇಳೆ ಅಪಾಯ ಕಂಡು ಬಂದಲ್ಲಿ ತಾಲ್ಲೂಕು ಆಡಳಿತವನ್ನು ಸಂಪರ್ಕಿಸಲು ಶೆಳ್ಳಿಗಿ, ದೇವಾಪುರ, ತಿಂಥಣಿ, ನೀಲಕಂಠರಾಯನಗಡ್ಡಿ, ಬಂಡೊಳ್ಳಿ, ಲಿಂಗದಳ್ಳಿ, ಬಂಡೊಳ್ಳಿ ಗ್ರಾಮಸ್ಥರಲ್ಲಿ ಕೋರಲಾಗಿದೆ. ನೀಲಕಂಠರಾಯನಗಡ್ಡಿ ಗ್ರಾಮಸ್ಥರು ಹೊರಜಗತ್ತಿನ ಸಂಪರ್ಕ ಸಾಧಿಸಲು ಕಿರು ಪುಟ್ ಸೇತುವೆ ಸಿದ್ಧವಾಗಿದ್ದು, ಜನರು ಸುಗಮವಾಗಿ ಸಂಚರಿಸಲು ಅನುಕೂಲ ಕಲ್ಪಿಸಲಾಗಿದೆ. ಅಗತ್ಯವಿದ್ದಲ್ಲಿ ಗಡ್ಡಿ ಜನರಿಗೆ ಪಡಿತರ ಒದಗಿಸಲಾಗುವುದು. ಅಲ್ಲಿಯ ಜನರು ಆರೋಗ್ಯದಿಂದ ಸುರಕ್ಷಿತವಾಗಿದ್ದಾರೆ ಎಂದರು.

ಉಪತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ಕಂದಾಯ ನಿರೀಕ್ಷಕ ವಿಠಲ್ ಬಂದಾಳ್, ಗ್ರಾಮಲೆಕ್ಕಿಗರಾದ ಸಂತೋಷರಡ್ಡಿ, ಪ್ರದೀಪ, ಗ್ರಾಮ ಸಹಾಯಕ ಅಲ್ಲಾಭಕ್ಷ ಶ್ಯಾನಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.