
ಯಾದಗಿರಿ: ಶಹಾಪುರ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ಸಾಯಿ ಮಂದಿರದ ಸಾಯಿಬಾಬಾ ಜಾತ್ರಾ ಮಹೋತ್ಸವ ಶನಿವಾರ ಆರಂಭವಾಗಿದ್ದು, ಸುಮಾರು 10 ಜೋಡಿಗಳ ಸಾಮೂಹಿಕ ವಿವಾಹವೂ ಜರುಗಿತು.
ಸಾಯಿಬಾಬಾ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಮತ್ತು ಮಂಗಳಾರತಿ ಮಹಾರಾಜ್ ದಿಗ್ಗಿ ಮತ್ತು ಸಿದ್ದಪಾಜಿ ದಿಗ್ಗಿ ನೇತೃತ್ವದಲ್ಲಿ ನಡೆದವು.
ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಕಡಕೋಳದ ರುದ್ರಮುನಿ ಶಿವಾಚಾರ್ಯರು, ‘ಧರ್ಮದ ಕಾರ್ಯದ ಕಡಿಮೆ ಆಗುತ್ತಿರುವ ಸಮಯದಲ್ಲಿ ಜಾತ್ರೆ ಮೂಲಕ ಉತ್ತಮ ಕೆಲಸಗಳು ನಡೆಯುತ್ತಿವೆ. ಇಂದಿನ ಸಮಾಜಕ್ಕೆ ಧರ್ಮ ಕಾರ್ಯಗಳ ಅಗತ್ಯವಿದೆ’ ಎಂದರು.
ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ‘ಸಾಮಾಜಿಕ ಕಾರ್ಯಗಳು ಪ್ರತಿಯೊಬ್ಬರಿಗೆ ಪ್ರೇರಣೆಯಾಗಬೇಕು. ಸಾಮೂಹಿಕ ವಿವಾಹ ಮಾಡುವ ಸರಳತೆ ಮೆರೆದಿದ್ದು, ಸರ್ವ ಜಾತಿಗಳ ಜನರೊಂದಿಗೆ ಬೆರೆಯುವ ಸಮಾಜಮುಖಿಯಾದ ಕಾರ್ಯಕ್ರಮವಿದೆ’ ಎಂದು ಹೇಳಿದರು.
ಮಾಜಿ ಶಾಸಕ ಗುರು ಪಾಟೀಲ ಮಾತನಾಡಿ, ‘ಸರ್ವ ಧರ್ಮಗಳ ಸಕಾರ ಮೂರ್ತಿ ಸಾಯಿಬಾಬಾ ಅವರ ಜಾತ್ರೆ ಮಾಡುವ ಮೂಲಕ ಜ್ಯಾತ್ಯತೀತ ತತ್ವಗಳನ್ನು ಜೀವಂತವಾಗಿ ಇರಿಸಲಾಗಿದೆ’ ಎಂದರು.
‘ಭಗವಂತ ಎಲ್ಲವೂ ಕೊಡುತ್ತಾನೆ. ಆದರೆ. ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವವರ ಕೊರತೆ ಇದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು.
ಗುರುಮಠಕಲ್‌ನ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಸಾಹಿತಿ ಸಿದ್ದರಾಮ ಹೊನ್ಕಲ್, ಹೋರಾಟಗಾರ ಉಮೇಶ ಮುದ್ನಾಳ್, ನೀಲಕಂಠ ಬಡಿಗೇರ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಮಠಾಧೀಶರು, ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಮಾಜಿ ಅಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಪ್ರಮುಖರಾದ ಶಾಂತರೆಡ್ಡಿ ದೇಸಾಯಿ, ಮಹಾದೇವಪ್ಪ ಗೌಡ ಅಬ್ಬೆತುಮಕೂರು, ವಿಶ್ವಾರಾಧ್ಯ ಚಟ್ಟಳ್ನಿ, ರವಿಂದ್ರನಾಥ ಹೊಸಮನಿ, ರಾಯಪ್ಪಗೌಡ ಹುಡೆದ್ ಸೇರಿ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.