ADVERTISEMENT

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ 10 ಸಾವಿರ ರೊಟ್ಟಿ ರವಾನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 15:28 IST
Last Updated 15 ಜನವರಿ 2025, 15:28 IST
ಗವಿಸಿದ್ದೇಶ್ವರ ಜಾತ್ರೆಯ ಪ್ರಯುಕ್ತ ವಡಗೇರಾ ತಾಲ್ಲೂಕಿನ ಐಕೂರು ಗ್ರಾಮದ ಯುವಕರು ದಾಸೋಹಕ್ಕೆ ರೊಟ್ಟಿ ತೆಗೆದುಕೊಂಡ ಹೊರಟ ವಾಹನಕ್ಕೆ ಪೂಜೆ ಸಲ್ಲಿಸಲಾಯಿತು
ಗವಿಸಿದ್ದೇಶ್ವರ ಜಾತ್ರೆಯ ಪ್ರಯುಕ್ತ ವಡಗೇರಾ ತಾಲ್ಲೂಕಿನ ಐಕೂರು ಗ್ರಾಮದ ಯುವಕರು ದಾಸೋಹಕ್ಕೆ ರೊಟ್ಟಿ ತೆಗೆದುಕೊಂಡ ಹೊರಟ ವಾಹನಕ್ಕೆ ಪೂಜೆ ಸಲ್ಲಿಸಲಾಯಿತು   

ವಡಗೇರಾ: ‘ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸೇವೆ ಸಲ್ಲಿಸಲು ಐಕೂರು ಗ್ರಾಮದ 30 ಯುವಕರು ತೆರಳಿರುವುದು ಸಂತಸದ ಸಂಗತಿ’ ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಶರಣಗೌಡ ಐಕೂರು ಹೇಳಿದರು.

ಕೊಪ್ಪಳದ ಗವಿಸಿದ್ದೇಶರ ಜಾತ್ರೆಯಲ್ಲಿ ಪಾಲ್ಗೊಳ್ಳುವ ಜನರ ಅನುಕೂಲಕ್ಕಾಗಿ ದಾಸೋಹಕ್ಕೆ ರೊಟ್ಟಿ ಹಾಗೂ ಜಾತ್ರೆಯಲ್ಲಿ ಸೇವೆ ಸಲ್ಲಿಸಲು ಹೊರಟ ಯುವಕರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಐಕೂರ ಗ್ರಾಮದಿಂದ ಕಳೆದ ಎರಡು ವರ್ಷಗಳಿಂದ ರೊಟ್ಟಿ ನೀಡಲಾಗುತ್ತಿದೆ. ಕಳೆದ ವರ್ಷ 5 ಸಾವಿರಕ್ಕೂ ಹೆಚ್ಚು ರೊಟ್ಟಿಗಳನ್ನು ದಾಸೋಹಕ್ಕೆ ನೀಡಲಾಗಿತ್ತು. ಈ ವರ್ಷ ಸುಮಾರು 10 ಸಾವಿರಕ್ಕೂ ಹೆಚ್ಚು ರೊಟ್ಟಿಗಳು ಗ್ರಾಮದ ಎಲ್ಲಾ ಮಹಿಳೆಯರು ದಾಸೋಹಕ್ಕೆ ನೀಡುತ್ತಿದ್ದಾರೆ’ ಎಂದರು.

ADVERTISEMENT

ಗ್ರಾಮದ ಪ್ರಮುಖ ವೆಂಕಟರಾಯಗೌಡ ಮಲಘಾಣ, ಶರಣಪ್ಪಗೌಡ ಬಿರಾದಾರ, ಮಲ್ಲಿಕಾರ್ಜುನ ಪೊಲೀಸ್‌ಪಾಟೀಲ, ನಾಗರಾಜ ಲಕ್ಕನೊರ, ಸಂತೋಷ ಸಜ್ಜನ, ಮಲ್ಲಿಕಾರ್ಜುನ ಹೆರುಂಡಿ, ಚಂದ್ರಪ್ಪ ದೇಸಾಯಿ, ಸಾಯಬಣ್ಣ ಮೆದರಗೋಳ, ಹುಲಗಪ್ಪ ಹೊಸಳ್ಳಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.