ADVERTISEMENT

‘ಸತ್ತರೂ ನಮ್ಮನ್ನು ಕೇಳುವವರಿಲ್ಲ’

ಕಂದಕೂರ: ಕ್ವಾರಂಟೈನ್‌ನಲ್ಲಿದ್ದನಲ್ಲಿದ್ದವರು ಗೋಳು ತೊಡಿಕೊಂಡ ವಿಡಿಯೋ ವೈರಲ್‌

​ಪ್ರಜಾವಾಣಿ ವಾರ್ತೆ
Published 24 ಮೇ 2020, 16:33 IST
Last Updated 24 ಮೇ 2020, 16:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾದಗಿರಿ: ‘ಗುರುಮಠಕಲ್ ತಾಲ್ಲೂಕಿನ‌ ಕಂದಕೂರ ಗ್ರಾಮದಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಇದ್ದವರಿಗೆ ಯಾವುದೇ ಸೌಲಭ್ಯ ನೀಡಿಲ್ಲ. 10 ದಿನಗಳಾದರೂ ಗಂಟಲಿನ ದ್ರವ ಸಂಗ್ರಹಿಸಿಲ್ಲ’ ಎನ್ನುವ ವಿಡಿಯೊ ವೈರಲ್‌ ಆಗಿದ್ದು,ಜಿಲ್ಲೆಯ ಸಾರ್ವಜನಿಕರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

‘ಮಹಾರಾಷ್ಟ್ರದಿಂದ ಬಂದಿರುವಕೂಲಿ ಕಾರ್ಮಿಕರನ್ನುಜಿಲ್ಲಾ ಆಯುಷ್‌ ಆಸ್ಪತ್ರೆಯಲ್ಲಿ ಜ್ವರ ತಪಾಸಣೆ ಮಾಡಿದ ನಂತರ ಕಂದಕೂರ ಕ್ವಾರಂಟೈನಲ್ಲಿ ತಂದು ಇರಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇಪರೀಕ್ಷೆಮಾಡಿಲ್ಲ’ ಎಂದು ವಿಡಿಯೊ ಮಾಡಿ ಆರೋಪಿಸಿದ್ದಾರೆ.

‘ಮಹಾರಾಷ್ಟ್ರ ಧಾರಾವಿ ಪ್ರದೇಶದಿಂದ ಬಂದವರಿಗೆ ಪರೀಕ್ಷೆ ಮಾಡಿದ್ದಾರೆ. ಅವರಲ್ಲಿ ಬಂದವರಿಗೆ ಮೂವರಿಗೆ ಪಾಸಿಟಿವ್‌ ಬಂದಿದೆ. ಇನ್ನೂದಾರೂ ನಮಗೆ ಟೆಸ್ಟ್‌ ಮಾಡಿಲ್ಲ. ಇಲ್ಲಿ ಊಟ, ನೀರಿಲ್ಲ. ನೀರಿನ ಸಮಸ್ಯೆ ಇದೆ. ನೀರಿನ ಸಮಸ್ಯೆ ಆಗಿ ಚಿಕ್ಕ ಮಕ್ಕಳಿಗೆ ಬೇಧಿಯಾಗಿತ್ತು. ಅಧಿಕಾರಿಗಳು ನಮ್ಮ ಗೋಳು ಕೇಳುತ್ತಿಲ್ಲ’ ಎಂದು ಅವಲತ್ತುಕೊಂಡಿದ್ದಾರೆ.

ADVERTISEMENT

‘10–20 ಜನರನ್ನು ಒಂದೇ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ. ನಮಗೆ ವ್ಯವಸ್ಥೆಕಲ್ಪಿಸಿಲ್ಲ.ಸತ್ತರೂ ನಮ್ಮನ್ನು ಕೇಳುವವರು ಇಲ್ಲ ಎಂದು ಆರೋಪಿದ್ದಾರೆ.ಎರಡು ದಿನಗಳ ಹಿಂದೆ ಕೊಲ್ಗೇಟ್‌ ಪೆಸ್ಟ್‌, ಸಾಬೂನು ಮಾತ್ರ ಕೊಟ್ಟಿದ್ದಾರೆ. ಸ್ಯಾನಿಟೈಸರ್‌ ಇಲ್ಲ. ಮಾಸ್ಕ್‌ ಕೊಟ್ಟಿಲ್ಲ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.