ADVERTISEMENT

ವ್ಯಾಜ್ಯರಹಿತ ಸಮಾಜ ನಿರ್ಮಾಣದ ಗುರಿ: ನ್ಯಾಯಾಧೀಶೆ ಹೇಮಾ ಪಸ್ತಾಪುರ

12ರಂದು ರಾಷ್ಟ್ರೀಯ ಲೋಕ ಅದಾಲತ್

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 6:52 IST
Last Updated 9 ಜುಲೈ 2025, 6:52 IST
ಶಹಾಪುರ ನ್ಯಾಯಾಲಯದಲ್ಲಿ ಮಂಗಳವಾರ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಬಗ್ಗೆ ನ್ಯಾಯಾಧೀಶೆ ಹೇಮಾ ಪಸ್ತಾಪುರ ಮಾತನಾಡಿದರು. ನ್ಯಾಯಾಧೀಶರಾದ ಶೋಭಾ, ಬಸವರಾಜ ಉಪಸ್ಥಿತರಿದ್ದರು
ಶಹಾಪುರ ನ್ಯಾಯಾಲಯದಲ್ಲಿ ಮಂಗಳವಾರ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಬಗ್ಗೆ ನ್ಯಾಯಾಧೀಶೆ ಹೇಮಾ ಪಸ್ತಾಪುರ ಮಾತನಾಡಿದರು. ನ್ಯಾಯಾಧೀಶರಾದ ಶೋಭಾ, ಬಸವರಾಜ ಉಪಸ್ಥಿತರಿದ್ದರು   

ಶಹಾಪುರ: 12ನೇ ಶತಮಾನಲ್ಲಿ ಬಸವಣ್ಣನವರು ಜಾತಿರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದು. ಅದರಂತೆ ನಮ್ಮ ರಾಷ್ರೀಯ ಲೋಕ ಅದಾಲತ್ ವ್ಯಾಜ್ಯರಹಿತ ಸಮಾಜ ನಿರ್ಮಾಣದ ಗುರಿ ಹಾಗೂ ಉದ್ದೇಶ ಹೊಂದಿದೆ. ಕಕ್ಷಿದಾರರು ಒಮ್ಮತದ ಮೂಲಕ ಪ್ರಕರಣ ಇತ್ಯಾರ್ಥಪಡಿಸಿಕೊಳ್ಳಬೇಕು ಎಂದು ಶಹಾಪುರ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಹೇಮಾ ಪಸ್ತಾಪುರ ತಿಳಿಸಿದರು.

ನಗರದ ನ್ಯಾಯಾಲಯದಲ್ಲಿ ಮಂಗಳವಾರ ಅವರು ಜು.12ರದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ರಾಜಿಯಾಗಬಲ್ಲ ಪ್ರಕರಣ, ಚೆಕ್ ಬೌನ್ಸ್, ಮೋಟಾರ ವಾಹನ ಕಾಯ್ದೆ,ಜನನ ನೋಂದಣಿ ಸೇರಿದಂತೆ ಹಲವು ಪ್ರಕರಣಗಳನ್ನು ಕಕ್ಷಿದಾರರು ತಮ್ಮಲ್ಲಿಯೇ ಇರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮುಕ್ತ ಮನಸ್ಸಿನಿಂದ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಂಡರೆ ಉತ್ತಮ ಎಂದರು.

ಪ್ರದಾನ ಸಿವಿಲ್ ನ್ಯಾಯಾಧೀಶೆ ಶೋಭಾ, ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ, ವಕೀಲರ ಸಂಘದ ಅಧ್ಯಕ್ಷ ಸಂತೋಷ ದೇಶಮುಖ, ಸಂಘದ ಕಾರ್ಯದರ್ಶಿ ಅಮರೇಶ ಇಟಗಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.