ADVERTISEMENT

ಯಾದಗಿರಿಯಲ್ಲಿ ಪ್ರಥಮ ಬಾರಿಗೆ ನಾಟಕ ಅಕಾಡೆಮಿಯಿಂದ ಫೆ.24ರಿಂದ ರಂಗ ಸಂಗೀತ ಶಿಬಿರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 16:29 IST
Last Updated 21 ಫೆಬ್ರುವರಿ 2021, 16:29 IST
ಪ್ರವೀಣ ನಾಯಕ
ಪ್ರವೀಣ ನಾಯಕ   

ಯಾದಗಿರಿ: ‘ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಪ್ರಥಮ ಬಾರಿಗೆ ಮೂರು ದಿನಗಳ ಕಾಲ ರಂಗ ಸಂಗೀತ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರವೀಣ ನಾಯಕ (ರಾಠೋಡ) ಕಲಬುರ್ಗಿ ತಿಳಿಸಿದರು.

‘ಫೆಬ್ರುವರಿ 24, 25 ಮತ್ತು 26ರಂದು ಶಿಬಿರ ನಡೆಯಲಿದ್ದು, 24ರಂದು ಬೆಳಿಗ್ಗೆ 10.30ಕ್ಕೆ ಶಿಬಿರದ ಉದ್ಘಾಟನೆ ನಡೆಯಲಿದೆ’ ಎಂದು ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್. ಭೀಮಸೇನ್ ಶಿಬಿರ ಉದ್ಘಾಟಿಸುವರು. ರಂಗ ಸಂಗೀತ ನಿರ್ದೇಶಕ ಮೈಸೂರಿರಿ ಶ್ರೀನಿವಾಸ್ ಭಟ್ ಚಿನ್ನಿ ಸಂಗೀತಾ ಶಿಬಿರ ನಡೆಸಲಿದ್ದಾರೆ. ಹಿರಿಯ ರಂಗಕಲಾವಿದರೂ ಆದ ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತ ಬಿ.ಕೆ.ಅಲ್ದಾಳ್ ಮಾಸ್ತರ, ಜಾನಪದ ಅಕಾಡೆಮಿ ಸದಸ್ಯ ಅಮರಯ್ಯ ಸ್ವಾಮಿ ಜಾಲಿಬೆಂಚಿ, ನಾಟಕಕಾರ ಶರಣು ನಾಟೆಕರ್‌, ರಾಮಕೃಷ್ಣ ವಿವೇಕಾನಂದ ಆಶ್ರಮದ ವೇಣುಗೋಪಾಲ ಪ್ರವರ್ಧನ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಮೂರು ದಿನ ಪ್ರತಿದಿನ ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಶಿಬಿರಾರ್ಥಿಗಳಿಗೆ ಸಾಮಾಜಿಕ ಐತಿಹಾಸಿಕ, ಪೌರಾಣಿಕ ಹಾಗೂ ಹವ್ಯಾಸಿ ನಾಟಕಗಳ ರಂಗಗೀತೆ ತರಬೇತಿ ನೀಡಲಾಗುವುದು. ಫೆ. 26 ರಂದು ಸಂಜೆ 4 ಗಂಟೆಗೆ ಸಂಗೀತ ಶಿಬಿರದ ಸಮಾರೋಪ ನಡೆಯಲಿದೆ. ಯಾದಗಿರಿ ವಿಶ್ವಕರ್ಮ ಏಕದಂಡಗಿ ಮಠದ ಶ್ರೀನಿವಾಸ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಎಸ್.ಎಸ್.ಜ್ಯುಗೇರಿ, ಅಲಗೂಡ ಶಾಲೆಯ ಮುಖ್ಯಗುರು ರಾಮಣ್ಣ ಕುಲಕರ್ಣಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್, ಶಿಬಿರದ ನಿರ್ದೇಶಕ ಶ್ರೀನಿವಾಸ ಭಟ್ (ಚಿನ್ನಿ) ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದರು.

ಹೆಚ್ಚಿನ ಮಾಹಿತಿಗಾಗಿ 94498 21947 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಸಂಗಮೇಶ, ವಿಶ್ವನಾಥ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.