ADVERTISEMENT

9 ದಿನದಲ್ಲಿ ಸಾವಿರಾರು ಕಾರ್ಮಿಕರು ಜಿಲ್ಲೆಗೆ ಆಗಮನ

ಆರೋಗ್ಯ ಇಲಾಖೆಯಲ್ಲಿ 31 ಸಾವಿರ ಕಾರ್ಮಿಕರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 16:06 IST
Last Updated 1 ಏಪ್ರಿಲ್ 2020, 16:06 IST

ಯಾದಗಿರಿ: ಕೊರೊನಾ ಭೀತಿ, ಲಾಕ್‌ಡೌನ್‌ ಪರಿಣಾಮ ಕಳೆದ 9 ದಿನಗಳಲ್ಲಿ ಸಾವಿರಾರು ಕಾರ್ಮಿಕರು ಮಹಾನಗರಗಳನ್ನು ತೊರೆದು ಜಿಲ್ಲೆಗೆ ಆಗಮಿಸಿದ್ದಾರೆ. ಅದರಲ್ಲಿ 31 ಸಾವಿರ ಜನಸಂಖ್ಯೆಯ ವಿವರವನ್ನು ಆರೋಗ್ಯ ಇಲಾಖೆ ದಾಖಲಿಸಿಕೊಂಡಿದೆ.

ಯಾದಗಿರಿ ತಾಲ್ಲೂಕಿನ 15,249, ಶಹಾಪುರ ತಾಲ್ಲೂಕಿನ 8,747, ಸುರಪುರ ತಾಲ್ಲೂಕಿನ 6,927 ಜನ ಸೇರಿದಂತೆ 30,923 ಮಂದಿ ಮಾರ್ಚ್‌ 23ರಿಂದ ಮಾರ್ಚ್‌ 31 ರವರೆಗೆ ಹೊರರಾಜ್ಯ, ಮಹಾನಗರಗಳಿಂದ ಬಂದಿರುವವರ ಮಾಹಿತಿ ಕಲೆಹಾಕಿದೆ. ಇನ್ನೂ ಸಾವಿರಾರು ಜನರನ್ನು ಪತ್ತೆ ಹಚ್ಚುವ ಕೆಲಸ ಆರೋಗ್ಯ ಇಲಾಖೆ ಮಾಡುತ್ತಿದೆ.

ಅಜಲಾಪುರ 639, ಗಾಜರಕೋಟ 2,308, ಕಂದಕೂರ 1,935, ಕೋಂಕಲ್‌ 1,190 , ಮಾಧ್ವಾರ 430, ಎಲ್ಹೇರಿ 1,498, ಗುರುಮಠಕಲ್‌ 185, ಅಲ್ಲಿಪುರ 100, ಬಳಿಚಕ್ರ 570, ಹತ್ತಿಕುಣಿ 1,243, ಹೋನಗೇರಾ 1,055, ಕೌಳೂರು 624, ಕೊಟಗೇರಾ 1,273, ಕಡೇಚೂರು 862, ಮಲ್ಹಾರ 565, ಮುದ್ನಾಳ 315, ಯರಗೋಳ 457 ಜನರು ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ.

ಶಹಾಪುರ ತಾಲ್ಲೂಕಿನ ಬೆಂಡೆಬೆಂಬಳಿ 887, ಚಾಮನಾಳ 989, ಚ‌ಟ್ನಳ್ಳಿ 563, ಗೋಗಿ 201, ಹತ್ತಿಗೂಡೂರ 132, ಹೈಯಾಳ (ಬಿ) 812, ಕುರಕುಂದ 499, ಸಗರ 319, ಶಿರವಾಳ 410, ತಡಿಬಿಡಿ 1,731, ವನದುರ್ಗಾ 1,754, ನಗರ ಆರೋಗ್ಯ ಕೇಂದ್ರ ಶಹಾಪುರ 450 ಜನರು ಮಾರ್ಚ್‌ 25ರಿಂದ 31ರವರೆಗೆ ಬಂದಿರುವ ಮಾಹಿತಿ ಆರೋಗ್ಯ ಇಲಾಖೆಗೆ ಲಭ್ಯವಾಗಿದೆ.

ಸುರಪುರ ತಾಲ್ಲೂಕಿನ ದೇವರಗೋನಾಲ 289, ಗುತ್ತಿಬಸವೇಶ್ವರ 348, ಹಸನಾಪುರ 326, ಹೆಮನೂರ 792, ಕಕ್ಕೇರಾ 1,484, ಕಲ್ಲದೇವನಹಳ್ಳಿ 787, ಕೆಂಭಾವಿ 54, ಕೋಡೆಕಲ್ಲ 560, ಮಲ್ಲಾ (ಬಿ) 118, ನಗನೋರ 479, ಪೇಠ ಅಮ್ಮಾಪುರ 593, ರಾಜನಕೋಳೂರ 40, ಶ್ರೀನಿವಾಸಪುರ 560, ಯಾಳಗಿ 412, ನಗರ ಆರೋಗ್ಯ ಕೇಂದ್ರ ಸುರಪುರ 85 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.

ADVERTISEMENT

***

ಹೊರರಾಜ್ಯ, ಮಹಾನಗರಗಳಿಂದ ಇನ್ನೂ ಸಾವಿರಾರು ಜನರು ಬಂದಿದ್ದಾರೆ. ಅಂಥವರನ್ನು ಗುರುತಿಸಲು ಮೂರು ಸಂಚಾರಿ ವೈದ್ಯರ ತಂಡ ರಚಿಸಲಾಗಿದೆ. ಅವರನ್ನು ಪತ್ತೆ ಹಚ್ಚಿ ತಪಾಸಣೆ ಮಾಡಲಾಗುತ್ತಿದೆ

- ಡಾ.ಎಂ.ಎಸ್‌.ಪಾಟೀಲ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.