ADVERTISEMENT

ದೇವಿಕೇರಾ ಉತ್ಸವದಲ್ಲಿ ಪ್ರಾಣಿ ಬಲಿ ತಡೆಗೆ ಬಿಗಿ ಬಂದೋಬಸ್ತ್‌

ದೇವಿಕೇರಾದಲ್ಲಿ ಪ್ರಾಣಿ ಬಲಿಗೆ ನಿಷೇಧ: ಬಿಗಿ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 15:45 IST
Last Updated 18 ಡಿಸೆಂಬರ್ 2023, 15:45 IST
ಸುರಪುರ ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಗ್ರಾಮ ದೇವತೆ ಉತ್ಸವದಲ್ಲಿ ಪ್ರಾಣಿ ಬಲಿ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ
ಸುರಪುರ ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಗ್ರಾಮ ದೇವತೆ ಉತ್ಸವದಲ್ಲಿ ಪ್ರಾಣಿ ಬಲಿ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ   

ಸುರಪುರ: ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಸೋಮವಾರ ನಡೆಯ ಗ್ರಾಮ ದೇವತೆಯ ಉತ್ಸವದಲ್ಲಿ ಪ್ರಾಣಿ ಬಲಿ ತಡೆಯಲು ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ.

ಗ್ರಾಮದ ದ್ಯಾವಮ್ಮ, ಪಾಲ್ಕಮ್ಮ ಮತ್ತು ಮರೆಮ್ಮ ದೇವಿಯರ ಉತ್ಸವ ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರದವರೆಗೆ ನಡೆಯಲಿದೆ. ಈ ವೇಳೆ ದೇವರ ಹೆಸರಲ್ಲಿ ಪ್ರಾಣಿಬಲಿ ಕೊಡುವ ಸಾಧ್ಯತೆ ಇದ್ದು, ದಲಿತರಿಗೆ ಒತ್ತಾಯ ಪೂರ್ವಕವಾಗಿ ಕೋಣದ ಮಾಂಸ ತಿನ್ನಿಸಲಾಗುತ್ತದೆ. ತಿನ್ನದವರಿಗೆ ಬಹಿಷ್ಕಾರ ಹಾಕುವ ಬೆದರಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ದೇವಸ್ಥಾನಗಳ ಮುಂದೆ ಮತ್ತು ಗ್ರಾಮದ ಸುತ್ತ 120 ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿದ್ದು, ಸುರಪುರ ಉಪವಿಭಾಗದ ಡಿವೈಎಸ್‍ಪಿ ಜಾವೀದ್ ಇನಾಮದಾರ, ತಹಶೀಲ್ದಾರ್ ಕೆ.ವಿಜಯಕುಮಾರ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.