ADVERTISEMENT

ಯಾದಗಿರಿ | ನಿರ್ಮಾಣ ಹಂತದ ಟೋಲ್ ಗೇಟ್ ಎದುರು ಅಪಘಾತ: ಸ್ಕೂಟರ್ ‌ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 7:00 IST
Last Updated 4 ಡಿಸೆಂಬರ್ 2025, 7:00 IST
<div class="paragraphs"><p>ಮೃತ ಯುವಕ ಸಚಿನ್‌</p></div>

ಮೃತ ಯುವಕ ಸಚಿನ್‌

   

ಯಾದಗಿರಿ: ತಾಲ್ಲೂಕಿನ ‌ಯರಗೋಳ ಸಮೀಪದ ರಸ್ತೆಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ಮೃತಪಟ್ಟಿದ್ದಾರೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಯಾಗಾಪುರ ತಾಂಡಾದ ನಿವಾಸಿ ಸಚಿನ್‌ (22) ಮೃತ ಯುವಕ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಕಲಬುರಗಿ – ಯಾದಗಿರಿ ರಾಷ್ಟ್ರೀಯ ಹೆದ್ದಾರಿ 150ರ ಯರಗೋಳ‌ ಸಮೀಪದಲ್ಲಿ ‌ನಿರ್ಮಾಣ ಹಂತದ ಟೋಲ್ ಗೇಟ್ ಇದೆ. ಟೋಲ್ ಗೇಟ್ ಮುಂಭಾಗದ ರಸ್ತೆಯ ಮೇಲೆ ಮಣ್ಣಿನ ಗುಡ್ಡೆ ಹಾಕಲಾಗಿದೆ. ಯಾದಗಿರಿ ಮಾರ್ಗದಿಂದ ವೇಗವಾಗಿ ದ್ವಿಚಕ್ರ ವಾಹನ (ಸ್ಕೂಟರ್) ಚಲಾಯಿಸಿಕೊಂಡ ಬಂದ ಸಚಿನ್, ಮಣ್ಣಿನ ಗುಡ್ಡೆಯನ್ನು ಹತ್ತಿಸಿದರು. ಮಣ್ಣಿನ ಗುಡ್ಡೆಯ ಮೇಲಿಂದ ಸ್ಕೂಟರ್ ಎತ್ತರಕ್ಕೆ ಹಾರಿದ್ದು ಸಚಿನ್, ರಸ್ತೆಯ ಮೇಲೆ‌ ಬಿದ್ದರು. ತಲೆಗೆ ಗಂಭೀರ ಗಾಯವಾಗಿ ಸವಾರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪಘಾತದ ದೃಶ್ಯಗಳು ಟೋಲ್ ಗೇಟ್ ಬಳಿ ಅಳವಡಿಸಿರುವ ಸಿಸಿಟಿವೆ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸವಾರನು ಸ್ಕೂಟರ್ ಮೇಲಿಂದ‌ ಕೆಳಗೆ ಹಾಗೂ ಸ್ಕೂಟರ್ ಸ್ವಲ್ಪ ಮುಂದಕ್ಕೆ‌ ಹೋಗಿ ಬೀಳುವುದು ವಿಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.