ADVERTISEMENT

ಯಾದಗಿರಿ: ‘ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 7:35 IST
Last Updated 1 ಜನವರಿ 2022, 7:35 IST
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಸಂಶೋಧನಾ ಕೇಂದ್ರಕ್ಕೆ ಈಚೆಗೆ ರೈತ ಮಹಿಳೆಯರು ಭೇಟಿ ನೀಡಿ ಆಧುನಿಕ ಕೃಷಿ ಪದ್ದತಿ ಬಗ್ಗೆ ಮಾಹಿತಿ ಪಡೆದರು. ಡಾ.ದಯಾನಂದ ಸಾತಿಹಾಳ, ಡಾ.ಶಿವಾನಂದ ಹೊನ್ನಾಳ್ಳಿ ಇದ್ದರು
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಸಂಶೋಧನಾ ಕೇಂದ್ರಕ್ಕೆ ಈಚೆಗೆ ರೈತ ಮಹಿಳೆಯರು ಭೇಟಿ ನೀಡಿ ಆಧುನಿಕ ಕೃಷಿ ಪದ್ದತಿ ಬಗ್ಗೆ ಮಾಹಿತಿ ಪಡೆದರು. ಡಾ.ದಯಾನಂದ ಸಾತಿಹಾಳ, ಡಾ.ಶಿವಾನಂದ ಹೊನ್ನಾಳ್ಳಿ ಇದ್ದರು   

ಭೀಮರಾಯನಗುಡಿ (ಶಹಾಪುರ): ರೈತರು ಹೆಚ್ಚಿನ ಆದಾಯ ಪಡೆಯುವಲ್ಲಿ ಸಮಗ್ರ ಕೃಷಿಯಲ್ಲಿ ಎರೆಹುಳು ಬೇಸಾಯ, (ಕಪ್ಪ ಬಂಗಾರ) ಬಾರ್ಬರಿ ತಳಿಯ ಆಡು ಸಾಕಾಣಿಕೆ, ಮೀನು ಸಾಕಾಣಿಕೆ ಅಲ್ಲದೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆಯ ಜೀವನ ಮುನ್ನಡೆಸಬೇಕು ಎಂದು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ದಯಾನಂದ ಸಾತಿಹಾಳ ತಿಳಿಸಿದರು.

ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಸಂಶೋಧನಾ ಕೇಂದ್ರಕ್ಕೆ ಈಚೆಗೆ ರೈತ ಮಹಿಳೆಯರು ಭೇಟಿ ನೀಡಿ ಆಧುನಿಕ ಕೃಷಿ ಪದ್ದತಿ ಅಳವಡಿಕೆ ಬಗ್ಗೆ ಮಾಹಿತಿಯನ್ನು ಅವರು ನೀಡಿದರು.

ಸ್ಥಳೀಯ ಸಂಪನ್ಮೂಲಗಳನ್ನು ಪೂರಕವಾಗಿ ಉಪಯೋಗಿಸಿ ಕೊಂಡು ವ್ಯವಸಾಯ ವೆಚ್ಚದಲ್ಲಿ ಕಡಿತಗೊಳಿಸಿ ಹೆಚ್ಚಿನ ಆದಾಯ ಪಡೆಯಲು ರೈತರು ಮುಂದಾಗಬೇಕು ಎಂದರು.

ADVERTISEMENT

ನಂತರ ‘ಸಮಗ್ರ ಕೃಷಿ ಪದ್ಧತಿ ಹಾಗೂ ಜೈವಿಕ ಪೀಡೆ ನಿರ್ವಹಣೆ’ ಬಗ್ಗೆ ತರಬೇತಿ ನೀಡಲಾಯಿತು. ಜೈವಿಕ ಪೀಡೆ ನಿರ್ವಹಣೆ ಕುರಿತು ಡಾ. ಕಲ್ಮಠ ಹಾಗೂ ಡಾ. ಶಿವಾನಂದ ಹೊನ್ನಳ್ಳಿ ಮಾಹಿತಿ ನೀಡಿದರು. ಕಾಲೇಜಿನ ಡೀನ್ ಚನ್ನಬಸವಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮಸ್ಥಳದ ಸಂಸ್ಥೆಯ ಅಧಿಕಾರಿ ಮಲ್ಲಿಕಾರ್ಜುನ ಇದ್ದರು. 50 ಮಹಿಳೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.