ಸಾಂದರ್ಭಿಕ ಚಿತ್ರ
ಶಹಾಪುರ: ನಗರದ ಐಟಿಎಸ್‌ಎಂಟಿ ಜಮೀನು ಹತ್ತಿರ ಜಮೀನಿನಲ್ಲಿ ಡಿಡಿಯು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭೀಮಣ್ಣ ಮೇಟಿ ಅವರು ಸರ್ವೇ ನಂಬರ್ 90/1ರಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿರುವುದು ಕಂಡು ಬಂದಿದೆ. ಅಗತ್ಯ ದಾಖಲೆಗಳನ್ನು ಕಾರ್ಯಾಲಯಕ್ಕೆ ಸಲ್ಲಿಸುವಂತೆ ನಗರಸಭೆಯ ಪೌರಾಯುಕ್ತ ರಮೇಶ ಬಡಿಗೇರ ಸೋಮವಾರ ನೋಟಿಸ್ ಜಾರಿ ಮಾಡಿದ್ದಾರೆ.
ಕಟ್ಟಡ ಲೇ ಔಟ್ ಕಾಪಿ ಹಾಗೂ ಕಟ್ಟಡ ಪರವಾನಗಿ ಇನ್ನಿತರ ಸಂಬಂಧಪಟ್ಟ ದಾಖಲೆಗಳನ್ನು ಕಾರ್ಯಾಲಯಕ್ಕೆ ಸಲ್ಲಿಸಿದ ನಂತರ ಕಟ್ಟಡ ಕಾಮಗಾರಿ ನಡೆಸಬೇಕು ಎಂದು ನೋಟಿಸಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.