ADVERTISEMENT

‘ಕಡ್ಡಾಯವಾಗಿ ಲಸಿಕೆ ಪಡೆಯಿರಿ’

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 3:20 IST
Last Updated 6 ಜುಲೈ 2021, 3:20 IST
ಶಹಾಪುರ ನಗರದ ಬಾಪುಗೌಡ ಸ್ಮಾರಕ ಮಹಿಳಾ ಪದವಿ ಕಾಲೇಜಿನಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕಲಾಯಿತು
ಶಹಾಪುರ ನಗರದ ಬಾಪುಗೌಡ ಸ್ಮಾರಕ ಮಹಿಳಾ ಪದವಿ ಕಾಲೇಜಿನಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕಲಾಯಿತು   

ಶಹಾಪುರ: ಕೋವಿಡ್‌ನಿಂದ ಮುಕ್ತವಾಗಲು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು ಪ್ರಜ್ಞಾವಂತಿಕೆ ಮೆರೆಯಬೇಕು. ಲಸಿಕೆ ಹಾಕಿಸಿಕೊಳ್ಳುವುದರಿಂದ ಅಡ್ಡ ಪರಿಣಾಮ ಬೀರುತ್ತದೆ ಎಂಬ ಗಾಳಿ ಸುದ್ದಿಗೆ ಕಿವಿಗೊಡಬಾರದು. ವಿದ್ಯಾರ್ಥಿಗಳು ಸಹ ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಮೂಡಿಸಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೆದಾರ ತಿಳಿಸಿದರು.

ನಗರದ ಬಾಪುಗೌಡದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನಲ್ಲಿಎನ್.ಎಸ್.ಎಸ್. 'ಎ' ಮತ್ತು'ಬಿ' ಘಟಕಗಳ ಹಾಗೂ ತಾಲ್ಲೂಕು ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊರೊನಾ ಮೂರನೇ ಅಲೆ ಹರಡದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ಮಾಸ್ಕ್, ಸುರಕ್ಷಿತ ಅಂತರ, ಸ್ಯಾನಿಟೈಜರ ಬಳಕೆ ಮುಂತಾದ ಕ್ರಮಗಳನ್ನು ಇನ್ನೂ ಒಂದು ವರ್ಷದವರೆಗೆ ಕಡ್ಡಾಯವಾಗಿ ಪಾಲಿಸಬೇಕು ಎಂದರು.

ADVERTISEMENT

ತಹಶೀಲ್ದಾರ್ ಜಗನಾಥರಡ್ಡಿ, ಕಾಲೇಜಿನ ಪ್ರಾಚಾರ್ಯರಾದ ಶಿವಲಿಂಗಣ್ಣ ಸಾಹು, ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಯರಗೊಳ, ಆರೋಗ್ಯಅಧಿಕಾರಿ ಸಂಗಣ್ಣ ನುಚ್ಚಿನ್, ಉಪನ್ಯಾಸಕರಾದ ರಾಘವೇಂದ್ರ ಹಾರಣಗೇರಾ, ಸಂಗಣ್ಣ ದಿಗ್ಗಿ, ಸತೀಶ ತುಳೇರ, ಮಾನಯ್ಯಗೌಡಗೇರಾ, ದೇವಿಂದ್ರಪ್ಪ ಆಲ್ದಾಳ, ಸೈಯದ್ಚಾಂದಪಾಶ, ಅಶೋಕ ಶಹಬಾದಿ, ಶುಭಲಕ್ಷ್ಮೀ ಬಬಲಾದಿ, ಭೀಮರಾಯ ದೊರೆ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.