ADVERTISEMENT

ವಡಗೇರಾ: ಚಳಿ, ಶೀತಗಾಳಿಗೆ ನಡುಗುತ್ತಿರುವ ಜನರು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:47 IST
Last Updated 15 ನವೆಂಬರ್ 2025, 6:47 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ವಡಗೇರಾ: ‘ಮಳೆಗಾಲದಲ್ಲಿ ಮನೆ ನೋಡಬಾರದು, ಚಳಿಗಾಳದಲ್ಲಿ ಕನ್ಯೆ ನೋಡಬಾರದು’ ಎಂದ ಗಾದೆ ಮಾತಿಗೆ ಅನ್ವಯವಾಗುವಂತೆ ಕಳೆದ ಎರಡು ಮೂರು ದಿನಗಳಿಂದ ಬೀಸುತ್ತಿರುವ ಶೀತಗಾಳಿಗೆ ಹಾಗೂ ಚಳಿಗೆ ಜನರು ಥರಗುಟ್ಟುತಿದ್ದಾರೆ.

ಬೆಚ್ಚನೆಯ ಉಡುಪುಗಳು ಹೊರಕ್ಕೆ: ಚಳಿಯಿಂದ ತಪ್ಪಿಸಿಕೊಳ್ಳಲು ಮನೆಯ ಕಪಾಟಿನಲ್ಲಿ ಇದ್ದ ಬೆಚ್ಚನೆಯ ಉಡುಪುಗಳನ್ನು ಹಾಗೂ ವಸ್ತ್ರಗಳನ್ನು ತೆಗೆದು ಹಿರಿಯರು ಹಾಗೂ ಕಿರಿಯರು ಎನ್ನದೆ ಎಲ್ಲರೂ ಧರಿಸಿಕೊಳ್ಳುತಿದ್ದಾರೆ. ಇನ್ನೂ ಕೆಲವರು ಚಳಿಯಿಂದ ತಪ್ಪಿಸಕೊಳ್ಳಲು ಮೈತುಂಬಾ ರಗ್ಗು, ಕೌವದಿ, ಹಾಗೂ ಕಂಬಳಿಯನ್ನು ಹೊದ್ದಕೊಂಡು ಅಲೆದಾಡುವದು ಸಾಮಾನ್ಯ ದೃಶ್ಯವಾಗಿದೆ.

ಬೆಂಕಿ ಕಾಯಿಸಿಕೊಳ್ಳುತ್ತಿರುವ ಜನರು: ರಾತ್ರಿ ಸುಮಾರು 9 ಗಂಟೆಗೆ ಆರಂಭವಾಗುವ ಶೀತಗಾಳಿ ಬೆಳಿಗ್ಗೆ 7 ಗಂಟೆಯಾದರೂ ಬೀಸುತ್ತಿರುತ್ತದೆ ಇದರಿಂದ ತಪ್ಪಿಸಿಕೊಳ್ಳಲು ಜನರು ಕಸ ಕಡ್ಡಿಗಳನ್ನು ಸಂಗ್ರಹಿಸಿ ಅದಕ್ಕೆ ಬೆಂಕಿಯನ್ನು ಹಚ್ಚಿ ಮೈ ಕೈಗಳನ್ನು ಬೆಚ್ಚನೆ ಮಾಡಿಕೊಳ್ಳುತಿದ್ದಾರೆ

ADVERTISEMENT

ವಾಯು ವಿಹಾರಕ್ಕೆ ಬ್ರೇಕ್ : ಈ ಹಿಂದೆ ಬೆಳಿಗ್ಗೆ 4 ಗಂಟೆಗೆ ಎದ್ದು ವಾಯು ವಿಹಾರಕ್ಕೆ ಹೋಗುತಿದ್ದ ಜನರು ಚಳಿ ಹಾಗೂ ವಿಪರೀತ ಶೀತಗಾಳಿಯಿಂದಾಗಿ ಈಗ ಬೆಳಿಗ್ಗೆ 6 ಗಂಟೆಯ ನಂತರ ವಾಯು ವಿಹಾರಕ್ಕೆ ಹೋಗುತಿದ್ದಾರೆ. ಇನ್ನೂ ಕೆಲವರು ಬೆಳಗಿನ ಜಾವದ ವಾಯು ವಿಹಾರವನ್ನು ಬಿಟ್ಟು ಸಂಜೆ ವಾಯುವಿಹಾರ ಮಾಡುತಿದ್ದಾರೆ

ಬಿರುಕು ಬೀಡುತ್ತಿರುವ ಚರ್ಮ: ಚಳಿ ಹಾಗೂ ಶೀತಗಾಳಿಗೆ ಜನರು ಓಡಾಡುತ್ತಿರುವದರಿಂದ ಮೈ ಕೈಗಳಿಗೆ ಶೀತಗಾಳಿ ತಾಗಿ ದೇಹದ ಚರ್ಮ ಸುಕ್ಕು ಕಟ್ಟುವದರ ಜತೆಗೆ ಕೈ ಹಾಗೂ ಕಾಲುಗಳ ಹಿಮ್ಮಡಿಗಳಲ್ಲಿ ಬೀರುಕು ಹಾಗೂ ತುಟಿಗಳು ಸೀಳುತ್ತಿವೆ. ಇನ್ನೂ ಕೆಲವರ ಕಾಲುಗಳ ಹಿಮ್ಮಡಿಗಳು ಸೀಳಿ ಅದರಿಂದ ರಕ್ತ ಬರುತ್ತಿದೆ . ನಡೆದಾಡಲು ತೊಂದರೆ ಅನುಭವಿಸುತಿದ್ದಾರೆ.

ಕಡಲೆ ಹಿಟ್ಟಿಗೆ ಮೋರೆಹೋದ ಜನರು: ಈ ಹಿಂದೆ ಮುಖಕ್ಕೆ ದಿನದಲ್ಲಿ ಎರಡು ಮೂರು ವೇಳೆ ಸಾಬೂನು ಹಚ್ಚಿಕೊಂಡು ಮುಖ ತೊಳೆದುಕೊಳ್ಳುತ್ತಿರುವ ಜನರು ಚಳಿ ವಿಪರೀತವಾಗಿರುವದರಿಂದ ಸಾಬೂನನ್ನು ಮುಖಕ್ಕೆ ಹಚ್ಚುವ ಬದಲಾಗಿ ಮುಖದ ಚರ್ಮದ ಅಂದಕ್ಕಾಗಿ ಕಡಲೆ ಹಿಟ್ಟನ್ನು ಮುಖಕ್ಕೆ ಹಚ್ಚಿಕೊಂಡು ಮುಖ ತೊಳೆದುಕೊಳ್ಳುತಿದ್ದಾರೆ.

ಕೋಲ್ಡ್ ಕ್ರೀಮ್ ಗಳ ಮೋರೆ: ಛಳಿ ಹಾಗೂ ಶೀತಗಾಳಿಯಿಂದ ದೇಹದ ಚರ್ಮವು ಬೀರುಕು ಬಿಡಬಾರದು, ಚರ್ಮ ಬೂದು ಬಣ್ಣಕ್ಕೆ ತೀರುಗಬಾರದು ಎಂಬ ಉದ್ದೇಶದಿಂದ ಬಹಳಷ್ಟು ಜನರು ಚರ್ಮಕ್ಕೆ ಮೇಡಿಕಲ್‌ಗಳಲ್ಲಿ ಸಿಗುವ ಕೋಲ್ಡ್ ಕ್ರೀಮ್‌ಗಳಾದ ವ್ಯಾಸಲಿನ್, ಬೋಯಿಲಿನ್, ಹಾಗೂ ಇನ್ನಿತರ ಕ್ರೀಮ್‌ಗಳನ್ನು ಬಳಸುತಿದ್ದಾರೆ.

ಆದರೆ ಇಷ್ಟೆಲ್ಲಾ ದೇಹಕ್ಕೆ ಹಾಗೂ ಚರ್ಮಕ್ಕೆ ಬಳಸಿದರು ಸಹ ಚರ್ಮ ಹಾಗೂ ದೇಹದ ಅಂಗಾಂಗಳಲ್ಲಿ ಮೃದುತನ ಕಂಡು ಬರುತಿಲ್ಲ. ಹೇಗಪ್ಪ ಇನ್ನೂ ಎರಡು ತಿಂಗಳು ಚಳಿಗಾಲವನ್ನು ಕಳೆಯುವದು ಎಂಬ ಚಿಂತೆ ಜನರಲ್ಲಿ ಕಾಡುತ್ತಿದೆ.

ಈ ಹಿಂದೆ ಕೇವಲ ಚಳಿ ಇರುತಿತ್ತು ಆದರೆ ಈ ವರ್ಷ ಚಳಿಯ ಜತೆಗೆ ಶೀತಗಾಳಿ ಬೀಡುತ್ತಿರುವದರಿಂದ ಮೈಯೆಲ್ಲಾ ನಡಗುತ್ತಿದೆ. ಎಷ್ಟೆ ಬೆಚ್ಚನೆಯ ಬಟ್ಟೆಗಳನ್ನು ಧರಿಸಿದರು ಸಹ ಚಳಿಯಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ
ಶರಣ ಪ್ಪ ಜಡಿ ಚಂದಾಸಾ ಹುಲಿ ಪಟ್ಟಣದ ಹಿರಿಯರು
ಚಳಿಗಾಲದಲ್ಲಿ ಬೆಚ್ಚನೆಯ ಬಟ್ಟೆಗಳನ್ನು ಧರಿಸಿಕೊಳ್ಳುವದು ಬಹಳ ಅವಶ್ಯ. ಬಿಸಿಯಾದ ಆಹಾರ ಸೇವಿಸಬೇಕು. ಸೂರ್ಯನ ಕಿರಣಗಳು ಹೊರ ಬಂದಾಗ ಹಿರಿಯರು ವಯೋವೃದ್ಧರು ಮನೆಯಿಂದ ಹೊರಡಗೆ ಬರಬೇಕು. ಚಿಕ್ಕ ಮಕ್ಕಳಿಗೆ ಚಳಿಗಾಲದಲ್ಲಿ ನೆಗಡಿ ಕೆಮ್ಮ ಬರುವದು ಸಹಜ ಇದನ್ನು ತಪ್ಪಿಸಬೇಕಾದರೆ ಮಕ್ಕಳ ತಲೆಗೆ ಕುಲಾಯಿ ಬೆಚ್ಚನೆಯ ಉಡುಪು ಹಾಕಬೇಕು
ಜಗನ್ನಾಥರಡ್ಡಿ ತಂಗಡಗಿ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ವಡಗೇರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.