ADVERTISEMENT

ಭೀಮೆಗೆ 1.50 ಲಕ್ಷ ಕ್ಯುಸೆಕ್ ನೀರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 14:19 IST
Last Updated 6 ಆಗಸ್ಟ್ 2024, 14:19 IST
ವಡಗೇರಾ ಸಮೀಪ ಹರಿಯುವ ಭೀಮಾ ನದಿಗೆ ಹೆಚ್ಚಿನ ನೀರು ಬಂದಿರುವುದರಿಂದ ವೀರಾಂಜನೇಯ ದೇವಸ್ಥಾನ ಮುಳುಗಡೆಯಾಗಿದೆ
ವಡಗೇರಾ ಸಮೀಪ ಹರಿಯುವ ಭೀಮಾ ನದಿಗೆ ಹೆಚ್ಚಿನ ನೀರು ಬಂದಿರುವುದರಿಂದ ವೀರಾಂಜನೇಯ ದೇವಸ್ಥಾನ ಮುಳುಗಡೆಯಾಗಿದೆ   

ವಡಗೇರಾ: ಭೀಮಾ ನದಿಗೆ ಮಹಾರಾಷ್ಟ್ರಯದ ಉಜನಿ ಜಲಾಶಯದಿಂದ 1.50 ಲಕ್ಷ ಕ್ಯುಸೆಕ್ ನೀರು ಹರಿ ಬಿಟ್ಟಿದ್ದರಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹರಿಯುವ ಬೀಮಾ ನದಿ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. 

ತಾಲ್ಲೂಕಿನ ನಾಯ್ಕಲ್, ಬೀರನಾಳ, ಗಡ್ಡೆಸೂಗುರ, ಕುಮನೂರ, ಕಂದಳ್ಳಿ, ಜೋಳದಡಗಿ, ಶಿವನೂರ, ಸೂಗುರು ಗ್ರಾಮಗಳ ವ್ಯಾಪ್ತಿಯಲ್ಲಿ ಭಿಮಾ ನದಿ ಹರಿಯುತ್ತದೆ. 

ಭೀಮಾ ನದಿಗೆ ಹೆಚ್ಚಿನ ಪ್ರವಾಹ ಬಂದರೆ ಕುಮನೂರ, ಶಿವನೂರ ಗ್ರಾಮಗಳಿಗೆ ಸ್ವಲ್ಪ ತೊಂದರೆಯಾಗುತ್ತದೆ.

ADVERTISEMENT

ಮನ್ನೆಚ್ಚರಿಕೆಯ ಕ್ರಮವಾಗಿ ವಡಗೇರಾ ತಹಶೀಲ್ದಾರ್ ಶ್ರೀನಿವಾಸ ಚಾಪೇಲ್ ಕಂದಳ್ಳಿ ಬ್ರೀಜ್ ಕಂ ಬ್ಯಾರೇಜ್‌ಗೆ ಬೇಟಿ ನೀಡಿದ ಪರಿಈಶಲನೆ ನಡೆಸಿದ್ದಾರೆ. ಬಳಿಕ ನದಿ ತಟದಲ್ಲಿ ಬರುವ ಶಿವನೂರ, ಬೇನಕನಹಳ್ಳಿ,ಮಾಚನೂರ, ಬಿಳ್ಹಾರ, ಬೂದಿಹಾಳ, ಹಾಗೂ ಇನ್ನಿತರ ಗ್ರಾಗಳಿಗೆ ಭೇಟಿ ನೀಡಿ, ‘ಯಾರು ನದಿಗೆ ಇಳಿಯಬಾರದು ಹಾಗೂ ಜಾನುವಾರುಗಳನ್ನು ನದಿಯ ಇಳಿಸಬಾರದು. ನದಿ ಪಾತ್ರದಲ್ಲಿ ಇಳಿದು ಕೃಷಿ ಚಟುವಟಿಕೆಗಳನ್ನು ನಡೆಸಬಾರದು’ ಎಂದು ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಗಳಲ್ಲಿ ಡಂಗೂರ ಸಾರಿ ಜಾಗೃತಿ ಮೂಡಿಸಲಾಗಿದೆ. ಪ್ರವಾಹ ಎದುರಿಸಲು ಕಂದಾಯ ಇಲಾಖೆ ಸನ್ನದ್ದವಾಗಿದೆ ಎಂದು ತಹಶೀಲ್ದಾರ ಶ್ರೀನಿವಾಸ ಚಾಪೇಲ್ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷರಾದ ಸಂಜು ಕಾವಲಿ,ಗ್ರಾಮ ಆಡಳಿತಾಧಿಕಾರಿಗಳಾದ ಬಸವರಾಜ ಮೋಟಗಿ, ಭವಾನಿ, ಸುಚಿತ್ರಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.