ADVERTISEMENT

ಮಾರುಕಟ್ಟೆ ನೋಟ | ಯಾದಗಿರಿ: ಟೊಮೆಟೊ ₹ 20ಕ್ಕೆ ಮಾರಾಟ

ಬಿ.ಜಿ.ಪ್ರವೀಣಕುಮಾರ
Published 27 ಏಪ್ರಿಲ್ 2025, 7:56 IST
Last Updated 27 ಏಪ್ರಿಲ್ 2025, 7:56 IST
ಯಾದಗಿರಿ ನಗರದ ರೈಲ್ವೆ ಸ್ಟೇಷನ್‌ ಸಮೀಪದ ತರಕಾರಿ ಅಂಗಡಿ
ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ್‌
ಯಾದಗಿರಿ ನಗರದ ರೈಲ್ವೆ ಸ್ಟೇಷನ್‌ ಸಮೀಪದ ತರಕಾರಿ ಅಂಗಡಿ ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ್‌   

ಯಾದಗಿರಿ: ಹಸಿ ಶುಂಠಿ, ಬೆಳ್ಳುಳ್ಳಿ, ಬೀನ್ಸ್ ಬಿಟ್ಟು ಉಳಿದೆಲ್ಲ ತರಕಾರಿ ದರ ನೂರರ ಒಳಗಿದೆ.

ಟೊಮೆಟೊಗೆ ಅತ್ಯಂತ ಕಡಿಮೆ ದರ ಇದೆ. ಬೇಸಿಗೆಯಲ್ಲಿ ತರಕಾರಿ ಏರಿಳಿತವಾಗುವುದು ಸಾಮಾನ್ಯ. ಆದರೆ,  ಕಳೆದ ವರ್ಷ ಪೂರ್ತಿ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದ್ದ ಹಸಿ ಶುಂಠಿ, ಬೆಳ್ಳುಳ್ಳಿ ಈಗ ಇಳಿಕೆ ಕಂಡಿದ್ದು, ಎರಡು ಮೂರು ಗುಣಮಟ್ಟದಲ್ಲಿ ಮಾರಾಟ ಮಾಡಲಾಗುತ್ತಿದೆ. ಹಸಿ ಶುಂಠಿ ಕೆಜಿಗೆ ₹ 80 ರಿಂದ 100, ಬೆಳ್ಳುಳ್ಳಿ ₹ 120 ರಿಂದ ₹140 ದರವಿದೆ.

ಆಲೂಗಡ್ಡೆ, ಈರುಳ್ಳಿ, ಬದನೆಕಾಯಿ, ಬೆಂಡೆಕಾಯಿ, ದೊಣ್ಣೆಮೆಣಸಿನಕಾಯಿ, ಎಲೆಕೋಸು, ಹೂಕೋಸು, ಚವಳೆಕಾಯಿ ₹30 ರಿಂದ ₹70 ದರವಿದೆ.

ADVERTISEMENT

ಸೌತೆಕಾಯಿ, ಮೂಲಂಗಿ, ಬಿಟ್‌ರೂಟ್, ಅವರೆಕಾಯಿ, ತೊಂಡೆಕಾಯಿ ಕಳೆದ ತಿಂಗಳಿಂದ ಈ ತಿಂಗಳಲ್ಲಿ ₹5 ರಿಂದ ₹10 ಏರಿಕೆಯಾಗಿದೆ. ಬೇಸಿಗೆಯಲ್ಲಿ ನಿಂಬೆಹಣ್ಣು ಇನ್ನೂ ಹೆಚ್ಚಿನ ದರಕ್ಕೆ ಏರಿಕೆಯಾಗಿಲ್ಲ. ₹5ಕ್ಕೆ ಒಂದು ಮಾರಾಟವಾಗುತ್ತಿದೆ.

ಸೊಪ್ಪುಗಳ ದರ:

ಮೆಂತ್ಯೆ ₹20ಕ್ಕೆ ಮೂರು ಕಟ್ಟು, ಸಬ್ಬಸಗಿ  ರಾಜಗಿರಿ, ಪಾಲಕ್ ಸೊಪ್ಪು ₹10ಕ್ಕೆ ಒಂದು ಕಟ್ಟು, ಕೋತಂಬರಿ, ಪುದೀನಾ ಸೊಪ್ಪು ಒಂದು ಕಟ್ಟು ₹10–15, ಕರಿಬೇವು ಒಂದು ಕೆಜಿಗೆ ₹ 80, ನಿಂಬೆಹಣ್ಣು ಒಂದು ₹ 5, ಈರುಳ್ಳು ಸೊಪ್ಪು ಕೆಜಿಗೆ ₹30 ದರ ಇದೆ.

ಬೇಸಿಗೆಯಲ್ಲಿ ತರಕಾರಿ ದರ ಇಳಿಕೆಯಾಗಿದ್ದುನೂರಕ್ಕಿಂತ ಹೆಚ್ಚಿನ ಬೆಲೆ ಇಲ್ಲ. ಕಳೆದ ವರ್ಷ ಹೆಚ್ಚಿನ ದರಕ್ಕೆ ಮಾರಾಟವಾಗಿದ್ದ ಹಸಿ ಶುಂಠಿ ಬೆಳ್ಳುಳ್ಳಿ ಈ ವರ್ಷ ಇಳಿಕೆಯಾಗಿದೆ
ಮಹ್ಮದ್‌ ಇಮ್ರಾನ್‌ ತರಕಾರಿ ವ್ಯಾಪಾರಿ
ಹಲವಾರು ತಿಂಗಳಿಂದ ಏರುಗತಿಯಲ್ಲಿದ್ದ ಹಸಿಶುಂಠಿ ಬೆಲೆ ಈ ವರ್ಷ ಇಳಿಕೆ ಕಂಡಿದೆ. ಬೇಸಿಗೆಯಲ್ಲಿ ತರಕಾರಿ ದರ ಇಳಿಕೆಯಾಗಿರುವುದು ಗ್ರಾಹಕರಿಗೆ ಅನುಕೂಲವಾಗಿದೆ
ವಿರೇಂದ್ರ ಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.