ADVERTISEMENT

ಸುರಪುರ: ಶೇ 99.77ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 2:30 IST
Last Updated 11 ಡಿಸೆಂಬರ್ 2021, 2:30 IST
ಸುರಪುರದ ನಗರಸಭೆಯಲ್ಲಿ ಮತ ಚಲಾಯಿಸಿದ ನಗರಸಭೆ ಸದಸ್ಯರು
ಸುರಪುರದ ನಗರಸಭೆಯಲ್ಲಿ ಮತ ಚಲಾಯಿಸಿದ ನಗರಸಭೆ ಸದಸ್ಯರು   

ಸುರಪುರ: ತಾಲ್ಲೂಕಿನಲ್ಲಿಶುಕ್ರವಾರ ನಡೆದವಿಧಾನ ಪರಿಷತ್ ಮತದಾನ ಶಾಂತಿಯುತವಾಗಿತ್ತು. ಬೆಳಿಗ್ಗೆ 11 ಗಂಟೆಯೊಳಗೆ ಬಹುತೇಕ ಮತಗಟ್ಟೆಗಳಲ್ಲಿ ಸಂಪೂರ್ಣ ಮತದಾನವಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು ಪ್ರತ್ಯೇಕವಾಗಿ ಬಂದು ಮತದಾನ ಮಾಡಿದರು.

ಶಾಸಕ ರಾಜೂಗೌಡ ನಗರಸಭೆಯಲ್ಲಿ ಬಿಜೆಪಿ ಸದಸ್ಯರೊಂದಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರ ಹೆಸರು ನಗರಸಭೆ ಮತಪಟ್ಟಿಯಲ್ಲಿ ಇತ್ತು. ಅವರು ಲಿಂಗಸೂಗೂರಿನಲ್ಲಿ ಮತದಾನ ಮಾಡಿದ್ದಾರೆ.

‘23 ಗ್ರಾಮ ಪಂಚಾಯಿತಿ ಮತ್ತು ನಗರದ ನಗರಸಭೆಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಎಲ್ಲ ಗ್ರಾಮ ಪಂಚಾಯಿತಿ ಮತಕೇಂದ್ರಗಳಲ್ಲಿ ಶೇ 100ರಷ್ಟು ಮತದಾನವಾಗಿದೆ. ಸುರಪುರ ನಗರಸಭೆ ಮತಕೇಂದ್ರದಲ್ಲಿ ಶೇ 99.77 ಮತದಾನವಾಯಿತು. ತಾಲ್ಲೂಕಿನಲ್ಲಿ 241 ಮಹಿಳೆಯರು, 197 ಪುರುಷರು ಸೇರಿದಂತೆ ಒಟ್ಟು 438 ಜನರು ಮತದಾನ ಮಾಡಿದ್ದಾರೆ’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.