ADVERTISEMENT

ಯಾದಗಿರಿ: ಘೋಷ ವಾಕ್ಯಗಳಿಂದ ಮತದಾನ ಮಹತ್ವ ಜಾಗೃತಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 6:33 IST
Last Updated 2 ಏಪ್ರಿಲ್ 2023, 6:33 IST

ಯಾದಗಿರಿ: ನಗರದ ಶುಭಂ ಪದವಿ ಮಹಾವಿದ್ಯಾಲಯ ಉಪನ್ಯಾಸಕ ಗುರುಪ್ರಸಾದ್ ವೈದ್ಯ ಮತದಾನ ಮಹತ್ವ ಕುರಿತು ಘೋಷ ವಾಕ್ಯಗಳನ್ನು ರಚಿಸಿ ಮತದಾನ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ.

ನೋಟಿಗಾಗಿ ನಿಮ್ಮ ವೋಟು ಮಾರದಿರಿ ಪ್ರಜಾ ಶಕ್ತಿಯನ್ನು ಗೌರವಿಸಿ ಮೆರೆಸಿರಿ, ಮತದಾನದಿಂದ ದೂರ ಹೋಗದಿರಿ ಫಲಾಪೇಕ್ಷಗಳಿಗೆ ಮಾರುಹೋಗದಿರಿ, ಒಂದು ದಿನದ ಮತದಾನ ನಮ್ಮ ಪ್ರಜಾಪ್ರಭುತ್ವಕ್ಕೆ ಶಕ್ತಿಪ್ರಧಾನ, ಮದುವೆಯ ಮಮತೆಯ ಕರೆಯೋಲೆ ಭೂಷಣ ಮತದಾನ ಪ್ರಜಾಪ್ರಭುತ್ವದ ತೋರಣ, ಬಂದಿದ್ದಲ್ಲ ಬಾರಿಸಿದ್ದಲ್ಲ ಅನಬ್ಯಾಡ ಮತದಾನ ಮಾಡೋದು ಮರಿಬ್ಯಾಡ... ಈ ರೀತಿ 65ಕ್ಕೂ ಹೆಚ್ಚು ಘೋಷವಾಕ್ಯಗಳನ್ನು ರಚಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಮತದಾನದ ಪ್ರಾಮುಖ್ಯತೆ, ಮಹತ್ವ, ಜನ ಹಿತದೃಷ್ಟಿ, ಮತದಾರರ ಮಹತ್ವ, ರಾಷ್ಟ್ರದ ಪ್ರಗತಿಯಲ್ಲಿ ಸಾಮೂಹಿಕ ಮತದಾನದ ಉತ್ತಮ ಪರಿಣಾಮಗಳು, ಗುಣಲಕ್ಷಣಗಳನ್ನು ಮತದಾರರ ಜಾಗೃತಿ ಅಭಿಯಾನ ಎಂಬ ಘೋಷವಾಕ್ಯಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಈ ಘೋಷ ವಾಕ್ಯಗಳನ್ನು ಜಿಲ್ಲಾಡಳಿತಕ್ಕೆ ನೀಡಿ ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳುವಂತೆ ವಿನಂತಿಸಲಾಗುವುದು ಎಂದು ಗುರುಪ್ರಸಾದ ವೈದ್ಯ ತಿಳಿಸುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.