ADVERTISEMENT

ವಿವಿಧೆಡೆ ಕ.ಕ ದಿನಾಚರಣೆ ಉತ್ಸವ

ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಂಭ್ರಮ, ಪಟೇಲರ ಆದರ್ಶ ಪಾಲನೆಗೆ ಕರೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 15:32 IST
Last Updated 17 ಸೆಪ್ಟೆಂಬರ್ 2020, 15:32 IST
ಯಾದಗಿರಿಯ ಜೆಡಿಎಸ್‌ ಕಾರ್ಯಾಲಯದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು
ಯಾದಗಿರಿಯ ಜೆಡಿಎಸ್‌ ಕಾರ್ಯಾಲಯದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು   

ಯಾದಗಿರಿ: ನಗರ ಸೇರಿದಂತೆ ವಿವಿಧೆಡೆ ಗುರುವಾರಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು.ಈ ಭಾಗದ ಏಳ್ಗೆಗೆ ಅಭಿವೃದ್ಧಿಗೆ ಇಚ್ಛಾಶಕ್ತಿ ಮತ್ತು ಈ ಭಾಗದ ಪ್ರದೇಶದ ಮೇಲೆ ಅಭಿಮಾನ ಶೂನ್ಯರಾಗಿರುವುದು ದೊಡ್ಡ ಸಮಸ್ಯೆಯಾಗಿದೆ. ಅಭಿಮಾನ ಬೆಳೆಸಿಕೊಂಡು ಪ್ರಾಮಾಣಿಕವಾಗಿ ಪ್ರಯತ್ನಿಸಿದಾಗ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಗಣ್ಯರು ಹೇಳಿದರು.

ಜಾತ್ಯತೀತ ಜನತಾ ದಳ ಪಕ್ಷ: ನಗರದ ಜಾತ್ಯತೀತ ಜನತಾ ದಳ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ರಾಷ್ಟ್ರಧ್ವಜಾರೋಹಣವನ್ನು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್ ನೆರವೇರಿಸಿದರು.

ಜೆಡಿಎಸ್ ಮುಖಂಡರಾದ ವಿಶ್ವನಾಥ ಸಿರವಾರ, ಬಾಲಪ್ಪ ಚಿಕ್ಕಮೇಟಿ,ಜಿಲ್ಲಾ ಉಪಾಧ್ಯಕ್ಷ ಚೆನ್ನಪ್ಪಗೌಡ ಮೋಸಂಬಿ, ಶಿವಪ್ಪ ಮುಷ್ಟೂರು, ಬಾಲಮಿತ್ರ, ಅಬ್ದುಲ್ ಖಯ್ಯುಮ್, ಮಹಮ್ಮದ್ ಯಾಕೂಬ್, ಮಲ್ಲಿಕಾರ್ಜುನ ಮೇಟಿ, ಶರಣು ಪಡಶೆಟ್ಟಿ, ರಾಜಶೇಖರ ದೊರೆ, ವಿಶ್ವನಾಥ ಮಾಲಿ ಪಾಟೀಲ್, ಸ್ಯಾಮುವೆಲ್ ಕಣೇಕಲ್, ರಾಜು ಹೊಸಳ್ಳಿ, ಮಹೇಶ ಬೀರನಕಲ್, ಹಣಮಂತ್ರಾಯಗೌಡ, ಮಹಾದೇವಪ್ಪಗೌಡ ಇದ್ದರು.

ADVERTISEMENT

ಕರವೇ ಕಾರ್ಯಾಲಯ:ನಗರದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ರಾಷ್ಟ್ರಧ್ವಜಾರೋಹಣವನ್ನು ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ನೆರವೇರಿಸಿದರು.

ಈ ವೇಳೆ ತಾಲ್ಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ನಗರಾಧ್ಯಕ್ಷ ಅಂಬ್ರೇಷ್ ಹತ್ತಿಮನಿ, ಯುವ ಘಟಕದ ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ, ದೀಪಕ ಒಡೆಯರ್, ಅಬ್ದುಲ್ ಅಜೀಜ್, ಅಂಬಣ್ಣ ಹೋರುಂಚಾ, ಕಾಶಿನಾಥ ನಾನೇಕ, ಸಚಿನ್, ಅಜರ್, ಮರಲಿಂಗ ನಾಯಕ, ಲಿಂಗು ಮೇಧಾ, ಸಾಬಣ್ಣ ಬಡಿಗೇರ, ಶರಣು ನಾಯಕ ಇದ್ದರು.

ಜನತಾ ಟ್ರಸ್ಟ್‌ನಿಂದ ಧ್ವಜಾರೋಹಣ:ಹೈಕ ಗಾಂಧಿಕೊಲೂರ ಮಲ್ಲಪ್ಪ ಸ್ಥಾಪಿತ ಜನತಾ ಟ್ರಸ್ಟ್ ವತಿಯಿಂದ ಜನತಾ ಕಾಲೋನಿಯಲ್ಲಿನ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಪ್ರಥಮ ದರ್ಜೆ ಗುತ್ತಿಗೆದಾರ ಬಸುಗೌಡ ಬಿಳ್ಹಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಶ್ರೀರಕ್ಷಾ ಕಾಲೇಜು ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ, ಕಾಂಗ್ರೆಸ್ ಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷ ಸಾಬರೆಡ್ಡಿ ಕಲಬುರ್ಗಿ, ಜನತಾ ಟ್ರಸ್ಟ್ ಸಂಚಾಲಕ ಹಣಮಂತ್ರಾಯಗೌಡ ಮಾಲಿಪಾಟೀಲ, ಬೀರೇಶ ಚಿರತೆನೋರ್, ರಿಯಾಜ್ ಪಟೇಲ್ ವರ್ಕನಳ್ಳಿ, ಯೇಸುಮಿತ್ರಾ, ರಾಜಕುಮಾರ ಗಣೇರ್, ಅಭಿಷೇಕ ದಾಸನಕೇರಿ, ನಿತೇಶ್ ಕುರಕುಂದಿ, ವಿಜಯಕುಮಾರ, ಕೃಷ್ಣ ಇದ್ದರು.

ನಂತರ ಕೊಲೂರು ಮಲ್ಲಪ್ಪ ಅವರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಲಾಯಿತು.

ವಲ್ಲಭಬಾಯ್ ಪಟೇಲ್ ವೃತ್ತ:ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಘಕಟದ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ನಗರದ ಸರ್ದಾರ್‌ವಲ್ಲಭಬಾಯ್ ಪಟೇಲ್ ವೃತ್ತದಲ್ಲಿ ವಲ್ಲಭಭಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಂದ್ರಶೇಖರ ದಾಸನಕೇರಿ,ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಖಾಜಾಮೈನೋದ್ದಿನ್ ಪೇಂಟರ್, ಕರವೇ ಮುಖಂಡರಾದ ಚಂದ್ರಶೇಖರ ಹಿರೇಮಠ, ನಾಗೇಂದ್ರ ರಾಯಚೂರಕರ್, ಅಸ್ಲಂ, ಮಲ್ಲಿಕಾರ್ಜುನ ದೇವತ್ಕಲ್, ಪರಶುರಾಮ್ ಒಡೆಯರ್,ಮಲ್ಲಿಕಾರ್ಜುನ ಹಿರೇಮಠ ಇದ್ದರು.

ಕಡೇಚೂರುನಲ್ಲಿ ಉತ್ಸವ:ಯಾದಗಿರಿ ತಾಲ್ಲೂಕಿನ ಕಡೇಚೂರುನಲ್ಲಿ ಕರ್ನಾಟಕ ಯುವಕ ಸಂಘದ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.

ಸಂಘದ ಅಧ್ಯಕ್ಷ ನರಸಿಂಹ ಮಂಥನ್ ಗೌಡ, ಸೂಗಪ್ಪ ಮುಂಗಲ್, ಗುರು ಮಹೇಂದ್ರ, ವಿಠಲ್, ರಮೇಶ್ ಕಾವಲಿ ಸೇರಿದಂತೆ ಸಂಘದ ಸದಸ್ಯರು ಇದ್ದರು.

ಹಾಲಗೇರಾ ಗ್ರಾಪಂ:ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ರಾಷ್ಟ್ರಧ್ವಜಾರೋಹಣವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಸಜ್ಜನ್ ನೆರವೇರಿಸಿದರು.
ಕಾರ್ಯದರ್ಶಿ ನಾಗಪ್ಪ, ಮರೆಪ್ಪ ನಾಯ್ಕೊಡಿ, ನಾಗಪ್ಪ, ಗೂಳಪ್ಪ ನಾಯ್ಕೋಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.