ADVERTISEMENT

ಯಾದಗಿರಿ: ಡಿಸಿ ಹೆಸರಲ್ಲಿ ವೈದ್ಯಾಧಿಕಾರಿಗೆ ₹50 ಸಾವಿರ ವಂಚನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
   

ಯಾದಗಿರಿ: ವಾಟ್ಸ್ಆ್ಯಪ್‌ನಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಫೋಟೊ ಬಳಸಿಕೊಂಡು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯೊಬ್ಬರಿಂದ ₹50 ಸಾವಿರ ಪಡೆದು ವಂಚಿಸಿರುವ ಬಗ್ಗೆ ‘ಸೆನ್’ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಯೋತಿ ಡಿ.‌ಕಟ್ಟಿಮನಿ ವಂಚನೆಗೆ ಒಳಗಾದವರು.  ‘ಹಲೊ ಜ್ಯೋತಿ, ಕೆಲಸ ಹೇಗೆ ನಡೆಯುತ್ತಿದೆ’ ಎಂದು ವಂಚಕರು ವಾಟ್ಸ್‌ಆ್ಯಪ್‌ನಲ್ಲಿ ಇಂಗ್ಲಿಷ್‌ನಲ್ಲಿ ಸಂದೇಶ ಕಳುಹಿಸಿದ್ದರು. ಜಿಲ್ಲಾಧಿಕಾರಿಯೇ ಮೆಸೇಜ್ ಕಳುಹಿಸಿದ್ದಾಗಿ ನಂಬಿದ ಜ್ಯೋತಿ, ‘ಯಾವುದೇ ತೊಂದರೆ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದರು.

ಕೆಲ ನಿಮಿಷದ ಬಳಿಕ ಇಂಟರ್‌ನೆಟ್ ಬ್ಯಾಂಕಿಂಗ್‌ನಿಂದ ಹಣ ವರ್ಗಾವಣೆಗೆ ಸಮಸ್ಯೆ ಆಗಿದೆ. ₹50 ಸಾವಿರ ಕಳುಹಿಸಿ ಎಂದು ಬ್ಯಾಂಕ್ ಖಾತೆ ನಂಬರ್ ನೀಡಿದ್ದರು. ನಂಬಿದ ಜ್ಯೋತಿ ₹50 ಸಾವಿರ ವರ್ಗಾವಣೆ ಮಾಡಿದ್ದರು. ಮತ್ತೆ ₹20 ಸಾವಿರ ಕಳುಹಿಸಲು ಮೆಸೇಜ್ ಬಂದಾಗ ಶಂಕೆ ಬಂದಿದ್ದು, ಕರೆ ಮಾಡಿದಾಗ ವಂಚನೆ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.