ADVERTISEMENT

ಯಾದಗಿರಿ |ಪರಸ್ತ್ರೀ ಮಾತೆಯ ಸ್ವರೂಪ:  ಪೀಠಾಧಿಪತಿ ವೀರೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:25 IST
Last Updated 8 ಅಕ್ಟೋಬರ್ 2025, 5:25 IST
ಯಾದಗಿರಿಯ ದಾಸಬಾಳಧೀಶ್ವರ ಮಠದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವನ್ನು ವೀರೇಶ್ವರ ಸ್ವಾಮೀಜಿ, ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಉದ್ಘಾಟಿಸಿದರು 
ಯಾದಗಿರಿಯ ದಾಸಬಾಳಧೀಶ್ವರ ಮಠದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವನ್ನು ವೀರೇಶ್ವರ ಸ್ವಾಮೀಜಿ, ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಉದ್ಘಾಟಿಸಿದರು    

ಯಾದಗಿರಿ: ‘ಪುರುಷರು ಪರಸ್ತ್ರೀಯರನ್ನು ಹೆತ್ತವರಂತೆ, ಸಹೋದರಿಯರ ರೂಪದಲ್ಲಿ ಕಂಡು ಅವರನ್ನು ಗೌರವಿಸಬೇಕು. ಆಗ, ನಮ್ಮ ನಾಡು, ನುಡಿ, ಸಂಸ್ಕೃತಿ, ಪರಂಪರೆಯನ್ನು ಉಳಿಸಿದಂತೆ ಆಗುತ್ತದೆ’ ಎಂದು ದಾಸಬಾಳಧೀಶ್ವರ ಮಠದ ಪೀಠಾಧಿಪತಿ ವೀರೇಶ್ವರ ಸ್ವಾಮೀಜಿ ಹೇಳಿದರು.

ನಗರ ಹೊರವಲಯದ ವೀರೇಶ್ವರ ನಗರದ ದಾಸಬಾಳಧೀಶ್ವರ ಮಠದಲ್ಲಿ ಮಂಗಳವಾರ ಸೀಗೆ ಹುಣ್ಣಿಮೆ ಹಾಗೂ ದೇವಿ ಪಾರಾಯಣ ಮಹಾಮಂಗಲದ ಪಲ್ಲಕ್ಕಿ ಉತ್ಸವದ ಅಂಗವಾಗಿ 1,001 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

‘ನಮ್ಮ ಪಾರಂಪರಿಕ ಯುಗದಿಂದ ಹಿಂದೂ ಧರ್ಮವು ಸ್ತ್ರೀಯರಿಗೆ ಮಾತೆಯ ಸ್ವರೂಪದಲ್ಲಿ ಕಂಡು, ಗೌರವಿಸಿಕೊಂಡು ಬಂದಿದೆ. ಇಂದಿನ ಪೀಳಿಗೆಯು ಸನಾತನ ಧರ್ಮ ನಡೆದು ಬಂದ ದಾರಿಯಲ್ಲಿ ಮುನ್ನಡೆಯಬೇಕು’ ಎಂದರು.

ADVERTISEMENT

‘ಪ್ರತಿ ವರ್ಷವೂ ದಾಸಬಾಳ ಮಠದಲ್ಲಿ ರುದ್ರಾಭಿಷೇಕ, ಹೋಮ, ಎಲೆ ಪೂಜೆ, ಮಾತೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವ ನಡೆಸಿಕೊಂಡು ಹೋಗಲಾಗುತ್ತಿದೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ‘ಸಮಾಜದಲ್ಲಿ ಪ್ರತಿಯೊಬ್ಬರು ಸ್ತ್ರೀಯರನ್ನು ಗೌರವದಿಂದ ಕಾಣಬೇಕು. ನಮ್ಮ ಹಿಂದೂ ಧರ್ಮದ ಪರಂಪರೆಯನ್ನು ಉಳಿಸುವತ್ತ ಸಾಗಬೇಕು’ ಎಂದರು.

ಮುಖಂಡ ರಾಚಣ್ಣಗೌಡ ಮುದ್ನಾಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನಾಗರತ್ನ ಕುಪ್ಪಿ ಮಾತನಾಡಿದರು. ಸಂಗಮ್ಮ ವೀರಭಸವಂತರೆಡ್ಡಿ ಮುದ್ನಾಳ, ಕಾಡ ಮಾಜಿ ಅಧ್ಯಕ್ಷ ಶ್ರೀನಿವಾಸ ಕಂದಕೂರ, ನಗರಸಭೆ ಸದಸ್ಯೆ ಪ್ರಭಾವತಿ ಕಲಾಲ್, ಡಾ .ಕ್ಷಿತೀಜ್, ಲಕ್ಷ್ಮಿ ಪುತ್ರ ಪಾಟೀಲ, ಮಾರುತಿ ಕಲಾಲ್ ಸೇಸೇರಿದಂತೆ ಹಲವು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.