ADVERTISEMENT

ಕಾರ್ಯಕರ್ತರು ಧೈರ್ಯವಾಗಿ ಮತ ಕೇಳಿ: ಮಾಜಿ ಶಾಸಕ ಗುರು ಪಾಟೀಲ ಶಿರವಾಳ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 4:32 IST
Last Updated 17 ನವೆಂಬರ್ 2021, 4:32 IST
ಶಹಾಪುರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಬಿಜೆಪಿ ತಾಲ್ಲೂಕು ಮಟ್ಟದ ಕಾರ್ಯಕಾರಣಿ ಹಾಗೂ ವಿಧಾನ ಪರಿಷತ್‌ ಪೂರ್ವಭಾವಿ ಸಭೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ಉದ್ಘಾಟಿಸಿದರು
ಶಹಾಪುರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಬಿಜೆಪಿ ತಾಲ್ಲೂಕು ಮಟ್ಟದ ಕಾರ್ಯಕಾರಣಿ ಹಾಗೂ ವಿಧಾನ ಪರಿಷತ್‌ ಪೂರ್ವಭಾವಿ ಸಭೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ಉದ್ಘಾಟಿಸಿದರು   

ಶಹಾಪುರ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಚಿಂತನೆಯಿಂದಾಗಿ ಹಳ್ಳಿ ಹಳ್ಳಿಗಳು ಪ್ರಜ್ವಲಿಸಲು ಸಾಧ್ಯವಾಗಿದೆ. ವಿದ್ಯುತ್ ಸಂಪರ್ಕವಿಲ್ಲದ ದೇಶದ 40 ಸಾವಿರ ಗ್ರಾಮಗಳಿಗೆ ಬೆಳಕು ನೀಡುವ ಕೆಲಸ ಮಾಡಿದ್ದಾರೆ’ ಎಂದು ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಅಭಿಪ್ರಾಯಪಟ್ಟರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕಾರಣಿ ಹಾಗೂ ವಿಧಾನ ಪರಿಷತ್‌ ಚುನಾಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಶಿಕ್ಷಣ, ನರೇಗಾ ಯೋಜನೆ, ಆದರ್ಶ ಗ್ರಾಮ, ಗ್ರಾಮ ಸಡಕ್ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

ಬಿಜೆಪಿ ಕಾರ್ಯಕರ್ತರಿಗೆ ಧೈರ್ಯವಾಗಿ ಮತ ಕೇಳುವ ಅಧಿಕಾರವಿದೆ. ಕಿಸಾನ್ ಸಮ್ಮಾನ್ ಯೋಜನೆ, ಪ್ರತಿ ರೈತರ ಖಾತೆಗೆ ₹6 ಸಾವಿರ ನೆರವು ನೀಡುವುದು ಬಿಜೆಪಿಯ ಪ್ರಮುಖ ಯೋಜನೆಗಳಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ಶಿಷ್ಯವೇತನ ಘೋಷಿಸಿರುವುದು ಮತ್ತು ಕೃಷಿ ಚಟುವಟಿಕೆ ಕೈಗೊಳ್ಳುವವರಿಗೆ ಬಡ್ಡಿ ರಹಿತ ಸಾಲ ವಿತರಣೆಗೆ ಮನ್ನಣೆ ನೀಡಿರುವುದು ಕ್ರಾಂತಿಕಾರಕ ನಡೆ. ಇದರ ಬಗ್ಗೆ ನಮ್ಮ ಕಾರ್ಯಕರ್ತರು ಗ್ರಾಮೀಣ ಭಾಗದ ಜನರಿಗೆ ಮತ್ತು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳಿಗೆ ಮನನ ಮಾಡಿಸಬೇಕು ಎಂದು ಸಲಹೆ ನೀಡಿದರು.

ನಗರ ಘಟಕದ ಅಧ್ಯಕ್ಷ ದೇವು ಕೋನೇರ ಹಾಗೂ ಪಕ್ಷದ ಮುಖಂಡರಾದ ಡಾ.ಚಂದ್ರಶೇಖರ ಸುಬೇದಾರ, ಲಾಲನಸಾಬ ಖುರೇಶಿ, ಮರೆಪ್ಪ ಪ್ಯಾಟಿ ಶಿರವಾಳ, ರಾಮಚಂದ್ರ ಕಾಶಿರಾಜ, ಯಲ್ಲಯ್ಯ ನಾಯಕ ವನದುರ್ಗ, ಮಲ್ಲಿಕಾರ್ಜುನ ಗಂಧದಮಠ, ಅಶೋಕ ನಾಯಕ, ಮಲ್ಲಿಕಾರ್ಜುನ ಕಂದಕೂರ, ಅಮೃತ ಹೂಗಾರ ಹಾಗೂ ರಾಜೂ ಪತ್ತಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.