ADVERTISEMENT

ವಿಶ್ವ ಅಮ್ಮಂದಿರ ದಿನ 2022 | ಹುಣಸಗಿ: ಇಲ್ಲಿ ತಾಯಿಗೆ ನಿತ್ಯ ಪೂಜೆ

ಪ್ರತಿಮೆ ಸ್ಥಾಪಿಸಿದ ಶಾಸಕ ರಾಜುಗೌಡ, ಉದ್ಯಮಿ ದಯಾನಂದ,

ಭೀಮಶೇನರಾವ ಕುಲಕರ್ಣಿ
Published 7 ಮೇ 2022, 20:05 IST
Last Updated 7 ಮೇ 2022, 20:05 IST
ಹುಣಸಗಿ–ವಜ್ಜಲ ಮುಖ್ಯ ರಸ್ತೆಯಲ್ಲಿರುವ ತಮ್ಮ ತಾಯಿಯ ಮೂರ್ತಿಯೊಂದಿಗೆ ಉದ್ಯಮಿ ಎಸ್.ಪಿ.ದಯಾನಂದ
ಹುಣಸಗಿ–ವಜ್ಜಲ ಮುಖ್ಯ ರಸ್ತೆಯಲ್ಲಿರುವ ತಮ್ಮ ತಾಯಿಯ ಮೂರ್ತಿಯೊಂದಿಗೆ ಉದ್ಯಮಿ ಎಸ್.ಪಿ.ದಯಾನಂದ   

ಹುಣಸಗಿ (ಯಾದಗಿರಿ ಜಿಲ್ಲೆ): ಉದ್ಯಮಿ ಎಸ್‌.ಪಿ. ದಯಾನಂದ ಹಾಗೂಸುರಪುರ ಶಾಸಕ ರಾಜೂಗೌಡ ಅವರು ತಮ್ಮೂರಲ್ಲಿ ತಮ್ಮ ತಾಯಿ ಮೂರ್ತಿಗಳನ್ನು ನಿರ್ಮಿಸಿದ್ದಾರೆ.

ಸುರಪುರ ಕ್ಷೇತ್ರದ ಶಾಸಕ ರಾಜೂಗೌಡ
ಅವರ ತಾಯಿಯ ಮೂರ್ತಿ

ತಾಲ್ಲೂಕಿನ ವಜ್ಜಲ ಗ್ರಾಮದ ಉದ್ಯಮಿ ಎಸ್‌.ಪಿ. ದಯಾನಂದ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಹತ್ತು ವರ್ಷಗಳ ಹಿಂದೆ ಹುಣಸಗಿ–ವಜ್ಜಲ ಮುಖ್ಯ ರಸ್ತೆಯಲ್ಲಿ ತಮ್ಮ ತಾಯಿ ಸುಶೀಲಮ್ಮ ಪಟ್ಟಣಶೆಟ್ಟಿ ಅವರ ನೆನಪಿಗಾಗಿ ದೇವಸ್ಥಾನ ನಿರ್ಮಿಸಿದ್ದಾರೆ. ಅವರ ಮೂರ್ತಿಯನ್ನೂ ಅಲ್ಲಿ ಪ್ರತಿಷ್ಠಾಪಿಸಿದ್ದು, ಇಲ್ಲಿ ನಿತ್ಯ ಪೂಜೆ ನಡೆಯುತ್ತಿದೆ.

‘ಕಷ್ಟಪಟ್ಟು ದುಡಿದರೆ ಮುಂದೆ ರಾಜನಂತೆ ಮೆರೆಯುತ್ತೀಯಾ ಎಂದು ತಾಯಿ ಹೇಳುತ್ತಿದ್ದಳು. ಆಕೆಯ ಮಾತು ಇಂದು ಸತ್ಯವಾಗಿದೆ. ನಿತ್ಯ ನಾನು ತಾಯಿಯ ಚಿತ್ರಕ್ಕೆ ಪೂಜೆ ಸಲ್ಲಿಸಿಯೇ ಮನೆಯಿಂದ ಹೊರಡುತ್ತೇನೆ‘ ಎಂದು ದಯಾನಂದ ಹೇಳಿದರು.

ADVERTISEMENT

ಶಾಸಕ ರಾಜೂಗೌಡ ಅವರು ಕೊಡೇಕಲ್‌ ಗ್ರಾಮದಲ್ಲಿ ಅಮೃತ ಶಿಲೆಯ ತಾಯಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯವೂ ಪೂಜೆ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ.

‘ಜಗತ್ತಿನಲ್ಲಿ ಎಲ್ಲರಿಗೂ ಒಳ್ಳೆಯದನ್ನುಬಯಸುವ ಏಕೈಕ ಜೀವ ತಾಯಿ. ಆ ತಾಯಿಯನ್ನು ಎಷ್ಟು ಪೂಜಿಸಿದರೂ ಕಡಿಮೆ.ಸಮಾಜದಲ್ಲಿ
ಹೇಗೆ ಬದುಕಬೇಕು ಎಂಬುದನ್ನು ಕಲಿಸಿರುವ ನನ್ನ ತಾಯಿ ತಿಮ್ಮಮ್ಮ ಅವರೇ ನನ್ನ ಪಾಲಿನ ದೇವರು’ ಎಂದು ರಾಜೂಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.