ADVERTISEMENT

ಯಾದಗಿರಿ: ಅಭಿವೃದ್ಧಿ ಕಾಮಗಾರಿಗೆ ಚಾಲನೆ ಗ್ರಾಪಂ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 15:51 IST
Last Updated 10 ಜೂನ್ 2020, 15:51 IST
ಯಾದಗಿರಿ ತಾಲ್ಲೂಕಿನ ಚಾಮನಳ್ಳಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಗ್ರಾ.ಪಂ ಅಧ್ಯಕ್ಷೆ ಅನುರಾಧ ವೀರಭದ್ರಪ್ಪ ಯಡ್ಡಳ್ಳಿ ಚಾಲನೆ ನೀಡಿದರು
ಯಾದಗಿರಿ ತಾಲ್ಲೂಕಿನ ಚಾಮನಳ್ಳಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಗ್ರಾ.ಪಂ ಅಧ್ಯಕ್ಷೆ ಅನುರಾಧ ವೀರಭದ್ರಪ್ಪ ಯಡ್ಡಳ್ಳಿ ಚಾಲನೆ ನೀಡಿದರು   

ಯಾದಗಿರಿ: ತಾಲ್ಲೂಕಿನ ಬಂದಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಧ್ಯಕ್ಷೆ ಅನುರಾಧ ವೀರಭದ್ರಪ್ಪ ಯಡ್ಡಳ್ಳಿ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮನಳ್ಳಿ ಗ್ರಾಮದಲ್ಲಿ ₹ 9 ಲಕ್ಷ ವೆಚ್ಚದಲ್ಲಿ ಕೆರೆ ಹೂಳೆತ್ತುವುದು, ₹ 10 ಲಕ್ಷ ವೆಚ್ಚದಲ್ಲಿ ಯಡ್ಡಳ್ಳಿ ಗ್ರಾಮದ ಕೆರೆಯ ದಕ್ಷಿಣ ಭಾಗದ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.

ಅದರಂತೆ 100 ವ್ಯಾಟ್ಸ್‌ ಬೀದಿದೀಪಗಳನ್ನು ಬಂದಳ್ಳಿಯಲ್ಲಿ 11, ಯಡ್ಡಳ್ಳಿಯಲ್ಲಿ 17, ಚಾಮನಳ್ಳಿಯಲ್ಲಿ 6, ಚಾಮ
ನಳ್ಳಿ ತಾಂಡಾದಲ್ಲಿ 4 ಸೇರಿದಂತೆ ಒಟ್ಟು 38 ದೀಪಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ನರೇಗಾ ಎಂಜಿನಿಯರ್‌ ನಾಗರಾಜ ನಾಯಕ, ನರೇಗಾ ಬಿಎಫ್‌ಟಿ ಗಂಗಾಧರ ಹೆಡಗಿಮುದ್ರ, ತಾಲ್ಲೂಕು ಪಂಚಾ
ಯಿತಿ ಸದಸ್ಯೆ ದೇವಿಂದ್ರಮ್ಮ ಬಡಿಗೇರ, ಗ್ರಾಮ ಪಂಚಾಯಿತಿ ಸದಸ್ಯ ರಾಜಶೇಖರ ಪೊಲೀಸ್‌ ಪಾಟೀಲ, ಶರಣಪ್ಪ ಸಾವೂರ, ಮಲ್ಲಪ್ಪ ಅಪರಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.