ADVERTISEMENT

ಯಾದಗಿರಿ: 7 ಜನರಿಗೆ ಕೋವಿಡ್-19‌ ದೃಢ, ಸೋಂಕಿತರ ಸಂಖ್ಯೆ 916ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 15:55 IST
Last Updated 26 ಜೂನ್ 2020, 15:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರಮತ್ತೆ7 ಜನರಿಗೆಕೋವಿಡ್‌–19ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 916ಕ್ಕೆ ಏರಿಕೆಯಾಗಿದೆ.

ಶಹಾಪುರ ತಾಲ್ಲೂಕಿನ ಹೋತಪೇಟ ಗ್ರಾಮದ 35 ವರ್ಷದ ಪುರುಷ, ಸುರಪುರ ತಾಲ್ಲೂಕಿನ ರುಕ್ಮಾಪುರ ಲಕ್ಷ್ಮಿದೇವಸ್ಥಾನ ಸಮೀಪದ 55 ವರ್ಷದ ಮಹಿಳೆ, ಸುರಪುರ ಬಸ್ ಡಿಪೋದ 58 ವರ್ಷದ ಪುರುಷ, 54 ವರ್ಷದ ಪುರುಷ, 44 ವರ್ಷದ ಪುರುಷ, 50 ವರ್ಷದ ಪುರುಷ, ಹುಣಸಗಿ ಲಕ್ಷ್ಮಿದೇವಸ್ಥಾನ ಸಮೀಪದ 53 ವರ್ಷದ ಪುರುಷ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಸೋಂಕಿತರ ಪೈಕಿ ಇಬ್ಬರು ಮಹಾರಾಷ್ಟ್ರದ ಪುಣೆ ಹಾಗೂ ಮುಂಬೈಯಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ. ಪಿ-10661 ಐಎಲ್‍ಐ ಪ್ರಕರಣವಾಗಿದ್ದು, ಉಳಿದ ಸುರಪುರ ಬಸ್ ಡಿಪೋದ ನಾಲ್ಕು ಜನರು ಪಿ-8228ರ ಸಂಪರ್ಕದ ಹಿನ್ನೆಲೆ ಹೊಂದಿದ್ದಾರೆ.

ADVERTISEMENT

70 ಜನ ಗುಣಮುಖ,130 ಸಕ್ರಿಯ: ಜಿಲ್ಲೆಯಲ್ಲಿ ಕೋವಿಡ್-19 ದೃಢಪಟ್ಟ 916 ವ್ಯಕ್ತಿಗಳ ಪೈಕಿ ಶುಕ್ರವಾರ ಮತ್ತೆ 70 ಜನ ಗುಣಮುಖರಾಗಿದ್ದು, ಜೂನ್ 26ರವರೆಗೆ 785 ಜನ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಉಳಿದ 130 ಪ್ರಕರಣಗಳು ಸಕ್ರಿಯವಾಗಿವೆ.

1,101 ವರದಿ ಬಾಕಿ: ಶುಕ್ರವಾರ 102 ನೆಗೆಟಿವ್ ವರದಿ ಸೇರಿ ಈವರೆಗೆ 22,889 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 75 ಮಾದರಿಗಳು ಸೇರಿದಂತೆ 1101 ಮಾದರಿಗಳ ವರದಿ ಬರಬೇಕಿದೆ ಎಂದುಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್‌ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.