ADVERTISEMENT

ಯಾದಗಿರಿ; 130 ಜನರಿಗೆ ಕೋವಿಡ್‌ ದೃಢ

940ಕ್ಕೆ ಏರಿಕೆಯಾದ ಸಕ್ರಿಯ ಪ್ರಕರಣಗಳ ಸಂಖ್ಯೆ, 4 ಜನ ಗುಣಮುಖ

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 4:26 IST
Last Updated 28 ಜನವರಿ 2022, 4:26 IST
   

ಯಾದಗಿರಿ: ಜಿಲ್ಲೆಯಲ್ಲಿ ಗುರುವಾರ 130 ಜನರಿಗೆ ಕೋವಿಡ್‌ ದೃಢಪಟ್ಟಿದ್ದು, ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 940ಕ್ಕೆ ಏರಿಕೆಯಾಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ 39, ಗುರುಮಠಕಲ್‌ ತಾಲ್ಲೂಕಿನಲ್ಲಿ 7, ಶಹಾಪುರ ತಾಲ್ಲೂಕಿನಲ್ಲಿ 43, ವಡಗೇರಾ ತಾಲ್ಲೂಕಿನಲ್ಲಿ 4, ಸುರಪುರ ತಾಲ್ಲೂಕಿನಲ್ಲಿ 22, ಹುಣಸಗಿ ತಾಲ್ಲೂಕಿನಲ್ಲಿ 15 ಸೇರಿದಂತೆ ಒಟ್ಟಾರೆ 130 ಜನರಿಗೆ ಕೋವಿಡ್‌ ಇರುವುದು ಪತ್ತೆಯಾಗಿದೆ.

0 ಯಿಂದ 5 ವರ್ಷದೊಳಗಿನ ಇಬ್ಬರು ಮಕ್ಕಳು, 6ರಿಂದ 10 ವರ್ಷದೊಳಗಿನ 3, 11ರಿಂದ 18 ವರ್ಷದೊಳಗಿನ 41, 19ರಿಂದ 35 ರೊಳಗಿನ 55, 36ರಿಂದ 55 ವರ್ಷದೊಳಗಿನ 18, 55 ವರ್ಷ ಮೇಲ್ಪಟ್ಟ 11 ಜನ ಸೇರಿ 130 ಜನರಿಗೆ ಕೋವಿಡ್‌ ದೃಢಪಟ್ಟಿದೆ.

ADVERTISEMENT

ಪ್ರಾಥಮಿಕ ಸಂಪರ್ಕದಲ್ಲಿದ್ದ 1,300, ದ್ವಿತೀಯ ಸಂಪರ್ಕದಲ್ಲಿದ್ದ 1,300 ಜನರನ್ನು ಗುರುತಿಸಲಾಗಿದೆ. 124 ಜನ ಮನೆಯಲ್ಲಿಪ್ರತ್ಯಕವಾಗಿದ್ದರೆ 6 ಜನರು ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಹಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ 2, ಸುರಪುರ ತಾಲ್ಲೂಕು ಆಸ್ಪತ್ರೆಯಲ್ಲಿ 8 ಸೇರಿ 10 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೋಂ ಐಸೊಲೇಷನ್‌ಲ್ಲಿದ್ದ ಯಾದಗಿರಿ ತಾಲ್ಲೂಕಿನಲ್ಲಿ 3, ಸುರಪುರ ತಾಲ್ಲೂಕಿನಲ್ಲಿ ಒಬ್ಬರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.