ADVERTISEMENT

ಯಾದಗಿರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಕೋವಿಡ್‌ಗೆ ಬಲಿ

​ಪ್ರಜಾವಾಣಿ ವಾರ್ತೆ
Published 16 ಮೇ 2021, 2:00 IST
Last Updated 16 ಮೇ 2021, 2:00 IST
ಡಾ.ಬುದ್ಧೇಶ್ ಶಂಕರ ಸಿಂಗೆ
ಡಾ.ಬುದ್ಧೇಶ್ ಶಂಕರ ಸಿಂಗೆ   

ಕಲಬುರ್ಗಿ: ಕಲಬುರ್ಗಿಯ ಕರುಣೇಶ್ವರ ನಗರದ ನಿವಾಸಿ, ಯಾದಗಿರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಬುದ್ಧೇಶ್ ಶಂಕರ ಸಿಂಗೆ (53) ಅವರು ಸೊಲ್ಲಾಪುರದ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.

ಕೊರೊನಾ ಸೋಂಕಿನಿಂದ ಬಳಲಿದ್ದ ಅವರು ಚಿಕಿತ್ಸೆಯ ನಂತರ ಗುಣಮುಖರಾಗಿ ಮರಳಿದ್ದರು. ಆದರೆ, ಕೆಲವೇ ದಿನಗಳಲ್ಲಿ ಮತ್ತೆ ಅವರಿಗೆ ಬಹು ಅಂಗಾಂಗ ವೈಫಲ್ಯ ಕಂಡುಬಂದಿದ್ದರಿಂದ ಸೊಲ್ಲಾಪುರದ ವೈದ್ಯರು ಕಪ್ಪುಶಿಲೀಂದ್ರ (ಬ್ಲ್ಯಾಕ್‌ ಫಂಗಸ್‌) ಸೋಂಕು ಇರಬಹುದು ಎಂದು ಶಂಕಿಸಿದ್ದರು.ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಅವರ ಸ್ವಂತ ಊರಾದ ಅಫಜಲಪುರ ತಾಲ್ಲೂಕಿನ ಗೌರ (ಬಿ) ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT