ಹುಣಸಗಿ: ಪಟ್ಟಣ ಹಾಗೂ ಕೊಡೇಕಲ್ಲ, ನಾರಾಯಣಪುರ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮಂಗಳವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ.
ಮಧ್ಯಾಹ್ನ ಮೋಡಕವಿದ ವಾತಾವರಣವಿತ್ತು. ಸಂಜೆ ಗುಡುಗು ಮಿಶ್ರತ ಮಳೆ ಆರಂಭವಾಗಿ ಅರ್ಧ ಗಂಟೆಗೆ ಹೆಚ್ಚು ಕಾಲ ಗಾಳಿ ಸಹಿತ ಮಳೆ ಆಯಿತು.
ಬಿಸಿಲಿನ ಧಗೆ ಕಡಿಮೆಯಾಗಿ ಭೂಮಿ ತಂಪಾಗಿದೆ. ಗಾಳಿಗೆ ಅಲ್ಲಲ್ಲಿ ಮರ ಉರುಳಿ ಬಿದ್ದಿದೆ. ಪಟ್ಟಣದ ಯುಪಿ ಕ್ಯಾಂಪಿನ ಸಮುದಾಯ ಆರೋಗ್ಯ ಕೇಂದ್ರದ ಬಳಿ ತಾತ್ಕಾಲಿಕ ಶೆಡ್ ಮೇಲೆ ಮರ ಉರುಳಿ ಬಿದ್ಧಿದೆ. ಆದರೆ, ಯಾವುದೇ ಜೀವ ಹಾನಿಯಾಗಿಲ್ಲ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮರಲಿಂಗಪ್ಪ ನಾಟೇಕಾರ ತಿಳಿಸಿದರು. ಮಳೆಯಿಂದಾಗಿ ಸಂಜೆ ವಿದ್ಯುತ್ ಕಡಿತಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.