ವಡಗೇರಾ: ವಡಗೇರಾ ತಾಲ್ಲೂಕಿನ ಬಿಳ್ಹಾರ ಗ್ರಾಮದಲ್ಲಿ ಭಾವೈಕ್ಯತೆಯ ಸಂಕೇತವಾಗಿರುವ ಹಜರತ್ ಸೈಯ್ಯದ ಶಾಹ ಹುಸೇನ ಭಾಷಾ ದರ್ಗಾದ ಜಾತ್ರೆ ಏ.16 ರಿಂದ ಆರಂಭವಾಗಲಿದೆ ಎಂದು ದರ್ಗಾ ಸಮಿತಿಯು ತಿಳಿಸಿದೆ.
ಈ ಕುರಿತು ಸಮಿತಿಯು ಪತ್ರಿಕಾ ಹೇಳಿಕೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಜರತ್ ಸೈಯ್ಯದ ಶಾಹ ಹುಸೇನ ಭಾಷಾ ದರ್ಗಾದ ಜಾತ್ರೆಯು ಎ.16 ರಂದು ಗಂಧ,ಎ. 17 ರಂದು ದೀಪ, ಹಾಗೂ ಎ. 18 ರಂದು ಜಾತ್ರೆ ನಡೆಯಲಿದೆ ಎಂದು ಹೇಳಿದರು.
ಜಾತ್ರೆಗೆ ಸುತ್ತ ಮುತ್ತಲಿನ ಭಕ್ತರಲ್ಲದೇ ದೂರದ ಮುಂಬೈ, ಹೈದ್ರಾಬಾದ್, ತೆಲಂಗಾಣದಿಂದ ಭಕ್ತರು ಆಗಮಿಸುತ್ತಾರೆ ಎಂಬ ಮಾಹಿತಿಯನ್ನು ಸಮಿತಿಯವರು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.