ADVERTISEMENT

ಪಿಯು ಫಲಿತಾಂಶ: ಉತ್ತಮ ಸಾಧನೆ

ಉತ್ತಮ ಫಲಿತಾಂಶ ತಂದ ವಿದ್ಯಾರ್ಥಿಗಳಿಗೆ ಕಾಲೇಜು ವರ್ಗ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:06 IST
Last Updated 15 ಜುಲೈ 2020, 17:06 IST
ಪ್ರಿಯಾಂಕಾ
ಪ್ರಿಯಾಂಕಾ   

ಯಾದಗಿರಿ: ಪಿಯು ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತಂದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಸರ್ವಜ್ಞ ವಿಜ್ಞಾನ ಕಾಲೇಜು: ನಗರದ ಸರ್ವಜ್ಞ ವಿಜ್ಞಾನ ಕಾಲೇಜು ಪದವಿ ಪೂರ್ವ ಕಾಲೇಜಿನ ಪ್ರಿಯಾಂಕಾ ಶೇ 90ರಷ್ಟು ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಪ್ರೊ.ಚೆನ್ನಾರೆಡ್ಡಿ ಪಾಟೀಲ ಮತ್ತು ಗೀತಾ ಚೆನ್ನಾರೆಡ್ಡಿ ಪಾಟೀಲ
ತಿಳಿಸಿದ್ದಾರೆ.

ವಿದ್ಯಾರ್ಥಿನಿ ವಿಶ್ವಜ್ಯೋತಿ ಗಣಿತ ವಿಷಯದಲ್ಲಿ ಶೇ 100ಕ್ಕೆ 100 ಅಂಕ ಗಳಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು 3 ಡಿಸ್ಟಿಂಕ್ಷನ್, 21 ಪ್ರಥಮ, 02 ದ್ವಿತೀಯ ಸ್ಥಾನ ಗಳಿಸಿದ್ದು, ಕಾಲೇಜಿಗೆ ಒಟ್ಟು ಶೇ 92ರಷ್ಟು ಪ್ರತಿಶತ ವಿದ್ಯಾರ್ಥಿಗಳ ಫಲಿತಾಂಶ ಬಂದಿದ್ದರಿಂದ ಕಾಲೇಜಿನ ಕಾರ್ಯದರ್ಶಿ ಲಿಂಗಾರೆಡ್ಡಿಗೌಡ, ಪ್ರಾಂಶುಪಾಲ ಗಂಗಾಧರ ಬಡಿಗೇರ, ಕಾಲೇಜಿನ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರೇರಣ ಕಾಲೇಜು: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ನಗರದ ಪ್ರೇರಣ ಪಿಯು ಕಾಲೇಜಿಗೆ ಪ್ರಥಮ ವರ್ಷದಲ್ಲಿ ಶೇ 94ರಷ್ಟು ಫಲಿತಾಂಶ ಲಭಿಸಿದೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 45 ವಿದ್ಯಾರ್ಥಿಗಳಲ್ಲಿ 8-ಡಿಸ್ಟಿಂಕ್ಷನ್, 30-ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಶೇ 94 ಫಲಿತಾಂಶ ಬಂದಿದೆ.

ಅಂಜನಾ (91.86), ಭುವನೇಶ್ವರಿ (91.00), ಶಿಲ್ಪಾ (90.16), ಜಾವೆದ್ ಪಟೇಲ್ (88.60), ಪಲ್ಲವಿ ಪತ್ತಾರ್ (87.60), ಇರ್ಫಾನ್ ಪಟೇಲ್ (86.60), ಅಂಕಿತಾ (86.50) ಮತ್ತು ಮಲ್ಲಿಕಾರ್ಜುನ (85.80) ಫಲಿತಾಂಶ ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಗಣಿತದಲ್ಲಿ ಭುವನೇಶ್ವರಿ 100 ಕ್ಕೆ 100 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ ಹಾಗೂ ಪಿಸಿಎಂಬಿ (95) ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಭೀಮರೆಡ್ಡಿ ಪಾಟೀಲ (ಶೆಟ್ಟಿಹಳ್ಳಿ), ಕಾರ್ಯದರ್ಶಿ ನಿರಂಜನರೆಡ್ಡಿ ಪಾಟೀಲ, ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ಲಕ್ಷ್ಮೀರೆಡ್ಡಿ ಹಾಗೂ ಉಪನ್ಯಾಸಕರು ಸಂತಸ ವ್ಯಕ್ತಪಡಿಸಿದ್ದಾರೆ.

ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯ ಕಾಲೇಜಿನಲ್ಲಿ 4 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಭೂಮಿಕಾ ಡಿ.ಆರ್ (ಶೇ 89.5),ಸುಚಿತ್ರಾ (ಶೇ 88.83),ದಿಯಾ ಪಟೇಲ್ (ಶೇ 87),ಅಂಕಿತಾ (ಶೇ 85) ಫಲಿತಾಂಶ ಪಡೆದಿದ್ದಾರೆ.ಪ್ರಥಮ ದರ್ಜೆಯಲ್ಲಿ 23 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ.

ಡಿಡಿಯು ಕಾಲೇಜು: ಉತ್ತಮ ಸ್ಥಾನ ನಗರದ ಡಿಡಿಯು ವಿಜ್ಞಾನ ಕಾಲೇಜಿನ ಪಿಯು ವಿದ್ಯಾರ್ಥಿಗಳು ಉತ್ತಮ ಸ್ಥಾನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿ ಹೊನ್ನಪ್ಪ 562 (ಶೇ93.66), ಸವಿತಾ 539 (ಶೇ89.83), ಶರಣಬಸವ 529(ಶೇ 88.15) ಮತ್ತು ಸಾಬಣ್ಣ 511(ಶೇ 85) ಪಡಯುವ ಮೂಲಕ ಜಿಲ್ಲೆಯಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ.

4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 24 ಪ್ರಥಮ ದರ್ಜೆ, 2 ದ್ವಿತೀಯ ದರ್ಜೆ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಡಿಡಿಯು ಸಂಸ್ಥೆಯ ಅಧ್ಯಕ್ಷ ಡಾ. ಭೀಮಣ್ಣ ಮೇಟಿ ಹಾಗೂ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.