
ಯಾದಗಿರಿಯ ಗಂಜ್ ಪ್ರದೇಶದ ಆತ್ಮಲಿಂಗ ದೇವಸ್ಥಾನದ ರಥೋತ್ಸವ
ಯಾದಗಿರಿ: ನಗರದ ಗಂಜ್ ಪ್ರದೇಶದಲ್ಲಿನ ಮಲ್ಲಿನಾಥ ಆಶ್ರಮದ ಆತ್ಮಲಿಂಗ ದೇವಸ್ಥಾನದ 20ನೇ ಜಾತ್ರಾ ಮಹೋತ್ಸವ ಫೆ.3 ಮತ್ತು 4ರಂದು ಜರುಗಲಿದೆ ಎಂದು ಜಾತ್ರಾ ಮಹೋತ್ಸವ ಕಮಿಟಿ ಪ್ರಮುಖರಾದ ನಾಗಮ್ಮ ಶರಣಪ್ಪ ಮದ್ರಕಿ ತಿಳಿಸಿದ್ದಾರೆ.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾತ್ರೆಯಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಮಲ್ಲಯ್ಯ ಮುತ್ಯಾ ನಿರಗುಡಿ ಸಾನ್ನಿಧ್ಯ ವಹಿಸಲಿದ್ದಾರೆ. ಫೆ.3ರಂದು ಸಂಜೆ ಪಲ್ಲಕ್ಕಿ ಮತ್ತು ಕಳಸಗಳ ಮೆರವಣಿಗೆ, ರಾತ್ರಿ 8ಕ್ಕೆ ಮಲ್ಲಯ್ಯ ಮುತ್ಯಾ ನಿರಗುಡಿ ಅವರಿಂದ ಅಗ್ನಿ ಪುಟುವು ಮತ್ತು ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ಫೆ.4ರಂದು ಬೆಳಿಗ್ಗೆ 6ಕ್ಕೆ ಮಹಾರುದ್ರಾಭಿಷೇಕ, 7.30ಕ್ಕೆ ಅಗ್ನಿ ಪ್ರವೇಶ, ಸಂಜೆ 4ಕ್ಕೆ ಶ್ರೀಗಳ ತುಲಾಭಾರ ಮತ್ತು 5.30ಕ್ಕೆ ರಥೋತ್ಸವ ಜರುಗಲಿದೆ’ ಎಂದರು.
ಮಲ್ಲಯ್ಯ ಮುತ್ಯಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಲಿಂಗಪ್ಪ ಖಾಜಗಾರ, ತಾಲ್ಲೂಕು ಘಟಕದ ಅಧ್ಯಕ್ಷ ಬಸವಂತರೆಡ್ಡಿ ಮಲ್ಹಾರ, ಶಿವಕುಮಾರ ಸುಂಕಲೂರ, ಮಲ್ಲಿಕಾರ್ಜುನ ನಿಂಬರ್ಗಾ, ಮಲ್ಲಿಕಾರ್ಜುನ ಮದ್ರಕಿ, ನಾಗರಾಜ ಬೀರನೂರು, ಶಿವರಾಜ್ ಬೆಳೆಗೆರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.