ಸಾವು (ಪ್ರಾತಿನಿಧಿಕ ಚಿತ್ರ)
ಯಾದಗಿರಿ: ವ್ಯಕ್ತಿಯೊಬ್ಬರನ್ನು ಬೇರೆಡೆ ಕೊಲೆ ಮಾಡಿ, ಆತನ ಶವವನ್ನು ತಾಲ್ಲೂಕಿನ ಬಾಚವಾರ ಗ್ರಾಮದ ಹಳ್ಳದಲ್ಲಿ ಎಸೆಯಲಾಗಿದೆ.
ಗುರಮಠಕಲ್ ತಾಲ್ಲೂಕಿನ ಗಡಿಮೊಹಲ್ಲಾ ನಿವಾಸಿ ರಾಮಸಿಂಗ್ ಹಜಾರೆ (30) ಕೊಲೆಯಾದವರು. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಶ್ಚಟಗಳಲ್ಲಿ ತೊಡಗಿಸಿಕೊಂಡಿದ್ದ ರಾಮಸಿಂಗ್, ಅನ್ಯ ಧರ್ಮದ ಮಹಿಳೆಯೊಂದಿಗೆ ಸಂಬಂಧ ಇರಿಸಿಕೊಂಡಿದ್ದರು. ಸಂಬಂಧಿಕರು ತಂದಿದ್ದ ಬೈಕ್ ಅನ್ನು ವಾಪಸ್ ಕೊಡಲು ಆ.26ರಂದು ನಾವದಗಿಗೆ ತೆರಳಿದ್ದರು. ಸಂಬಂಧಿಕರ ಮನೆಯಲ್ಲಿ ಬೈಕ್ ಬಿಟ್ಟು ಗುರುಮಿಠಕಲ್‌ಗೆ ತೆರಳುವುದಾಗಿ ಬಸ್ ಹತ್ತಿದ್ದ ರಾಮಸಿಂಗ್ ಮನೆಗೆ ಬರಲಿಲ್ಲ. ಮೊಬೈಲ್ ಫೋನ್ ಸಹ ಬಂದ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಚವಾರ ಗ್ರಾಮದಲ್ಲಿ ಹಳ್ಳದಲ್ಲಿ ಬುಧವಾರ ಮಧ್ಯಾಹ್ನ ರಾಮಸಿಂಗ್ ಶವವಾಗಿ ಪತ್ತೆಯಾದರು. ಕತ್ತಿಗೆ ವೈರ್ ಅಥವಾ ಹಗ್ಗದಿಂದ ಬಿಗಿದು ಕೊಲೆ ಮಾಡಿ, ಹಳ್ಳದಲ್ಲಿ ತಂದು ಎಸೆಯಲಾಗಿದೆ ಎಂದಿದ್ದಾರೆ.
ಎಸ್‌ಪಿ ಪೃಥ್ವಿಕ್ ಶಂಕರ್, ಡಿಎಸ್‌ಪಿ ಸುರೇಶ್, ಸಿಪಿಐ ಸುನಿಲ್ ವಿ.ಮೂಲಿಮನಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಿಎಸ್‌ಐ ಹಣಮಂತ ಅವರು ಪ್ರಕರಣ ತನಿಖೆ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.